ಮೈಸೂರು, ನವೆಂಬರ್ 3, 2025:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ಆಪ್ತ ಹಾಗೂ ಬೆಂಬಲಿಗರಾದ ಮರಿಸ್ವಾಮಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.

ನಗರದ ಸ್ಪೆಕ್ಟ್ರಮ್ ಕಲ್ಯಾಣ ಮಂಟಪದಲ್ಲಿ ಈ ಮದುವೆ ಸಮಾರಂಭ ನಡೆಯಿತು. ಸುಗ್ಗನಹಳ್ಳಿಯ ಹೆಚ್.ಬಿ.ಮೀನಾಕ್ಷಿ ಮತ್ತು ಕೆ.ಮರಿಸ್ವಾಮಿಗೌಡ ಅವರ ಪುತ್ರನ ವಿವಾಹ ಇದಾಗಿದೆ. ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಅವರು ನವ ವಧು-ವರರಿಗೆ ಬೊಕ್ಕೆ ನೀಡಿ, ಅಕ್ಷತೆ ಹಾಕಿ ಆಶೀರ್ವದಿಸಿ, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
