ಮೈಸೂರು, ನವೆಂಬರ್ 12, 2025 : ನಗರದ ಪುರಭವನದ ಆವರಣದಲ್ಲಿ ನಡೆದ ಕಷ್ಟಭಂಜನ ಭೈರವ ಜನ್ಮಾಷ್ಠಮಿ ಕಾರ್ಯಕ್ರಮವು ಇಂದು (ನವೆಂಬರ್ 12) ವೈಭವದಿಂದ ಸಂಪನ್ನಗೊಂಡಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಬರೋಬ್ಬರಿ 2025 ಬಗೆಯ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇರಿಸಲಾಗಿದ್ದು, ಇದು ವಿಶ್ವದಾಖಲೆ ನಿರ್ಮಿಸುವತ್ತ ದಾಪುಗಾಲು ಇಟ್ಟಿದೆ.

ಕಳೆದ 8 ದಿನಗಳಿಂದ ನಡೆಯುತ್ತಿದ್ದ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೈಸೂರಿನ ಭಕ್ತಾದಿಗಳು ಸಾಕ್ಷಿಯಾದರು. ಈ ಮಹತ್ತರ ಕಾರ್ಯಕ್ರಮವು ಶ್ರೀ ಕೃಷ್ಣಗಿರಿ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ 1008 ಆಚಾರ್ಯ ಶ್ರೀ ವಸಂತ ವಿಜಯಾನಂದಗಿರೀಜೇ ಮಹಾರಾಜ್ ಅವರ ದಿವ್ಯ ಸನ್ನಿಧಿಯಲ್ಲಿ ಯಶಸ್ವಿಯಾಗಿ ನೆರವೇರಿತು.

ಭೈರವ ಜನ್ಮಾಷ್ಠಮಿ ಅಂಗವಾಗಿ 2025 ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇಡುವ ಮೂಲಕ ವಿಶಿಷ್ಟ ದಾಖಲೆಗೆ ಪ್ರಯತ್ನಿಸಲಾಗಿದೆ. ಈ ನೈವೇದ್ಯವು ಭಕ್ತರ ಗಮನ ಸೆಳೆಯಿತು. ಈ ವಿಶ್ವದಾಖಲೆಯ ಯತ್ನದ ಮೂಲಕ ಕಷ್ಟಭಂಜನ ಭೈರವ ಜನ್ಮಾಷ್ಠಮಿ ಕಾರ್ಯಕ್ರಮವು ಮೈಸೂರಿನ ಧಾರ್ಮಿಕ ಇತಿಹಾಸದಲ್ಲಿ ಒಂದು ಸ್ಮರಣೀಯ ಕಾರ್ಯಕ್ರಮವಾಗಿ ದಾಖಲಾಗಿದೆ.
