ಮೈಸೂರು, ಜನವರಿ 28, 2026 : ಅರಿವು ಸಂಸ್ಥೆ ವತಿಯಿಂದ ಚಾಮುಂಡಿಪುರಂ ಸುತ್ತಮುತ್ತ ವ್ಯಾಪರಸ್ಥರಿಗೂ ಹಾಗೂ ಗ್ರಾಹಕರಿಗೂ ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ ಪೇಪರ್ ಬ್ಯಾಗ್ ಉಪಯೋಗಿಸಿ ಎಂದು ಸಾರ್ವಜನಿಕರಿಗೆ ಪೇಪರ್ ಬ್ಯಾಗ್ ನೀಡಿ ಸಾರ್ವಜನಿ ಕರಿಗೆ ಪೇಪರ್ ಬ್ಯಾಗ್ ವಿತರಿಸಿದರು. ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಪೇಪರ್ ಬ್ಯಾಗ್ ಬಳಸು ವಂತೆ ಮನವಿ ಮಾಡಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಇಂದಿನ ಜನಜೀವನಕ್ಕೆ ಹಾಗೂ ನಮ್ಮ ವ್ಯಾವಹಾರಿಕವಾಗಿ ಬ್ಯಾಗ್ ಗಳು ಹಾಗೂ ಚೀಲಗಳು ಬಹಳ ಅವಶ್ಯಕ ಈ ನಿಟ್ಟಿನಲ್ಲಿ
ನಿಮ್ಮಲ್ಲಿ ನನ್ನ ಮನವಿ ಏನೆಂದರೆ ಎಲ್ಲರೂ ಪರಿಸರ ಹಿತರಾಗಿ ನಮ್ಮ ಪರಿಸರವನ್ನು ಉಳಿಸಲು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು. ದಿನನಿತ್ಯದ ಜೀವನಕ್ಕೆ ಬೇಕಾಗುವ ಕ್ಯಾರಿ ಬ್ಯಾಗ್ ಗಳನ್ನು ಪೇಪರ್ ಬ್ಯಾಗ್ ಗಳನ್ನು ಬಳಸಿ ವಾಯು ಮಾಲಿನ್ಯವನ್ನು ತಡೆಗಟ್ಟಲು ನಿಮ್ಮ ಜವಾಬ್ದಾರಿ ಬಹಳಷ್ಟಿದೆ ಆತ್ಮೀಯ ಬಂಧುಗಳೇ ಎಲ್ಲರೂ ಕೈಜೋಡಿಸೋಣ ನಮ್ಮ ಪರಿಸರವನ್ನು ಉಳಿಸುವ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅರಿವ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಗೌರಿಶಂಕರ ನಗರದ ಶಿವು, ದೂರ ರಾಜಣ್ಣ, ಆನಂದ್, ಜತ್ತಿ ಪ್ರಸಾದ್, ಶಿವಲಿಂಗ ಸ್ವಾಮಿ, ಪುರುಷೋತ್ತಮ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ, ಇನ್ನಿತರರು ಹಾಜರಿದ್ದರು
