PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ‘ಫುಲ್ ಮೀಲ್ಸ್’ ಚಿತ್ರದಲ್ಲಿ ‘ಫೋಟೋಗ್ರಾಫರ್ಸ್ ಪ್ಲರ್ಟ್ಸ್’ ಪದ ಬಳಕೆ: ಆಕ್ರೋಶ, ವಾಗ್ವಾದದ ಬಳಿಕ ಕ್ಷಮೆಯಾಚನೆ!
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ‘ಫುಲ್ ಮೀಲ್ಸ್’ ಚಿತ್ರದಲ್ಲಿ ‘ಫೋಟೋಗ್ರಾಫರ್ಸ್ ಪ್ಲರ್ಟ್ಸ್’ ಪದ ಬಳಕೆ: ಆಕ್ರೋಶ, ವಾಗ್ವಾದದ ಬಳಿಕ ಕ್ಷಮೆಯಾಚನೆ!
ಮುಖಪುಟಮೈಸೂರು ನಗರಸಿನಿಮಾ

‘ಫುಲ್ ಮೀಲ್ಸ್’ ಚಿತ್ರದಲ್ಲಿ ‘ಫೋಟೋಗ್ರಾಫರ್ಸ್ ಪ್ಲರ್ಟ್ಸ್’ ಪದ ಬಳಕೆ: ಆಕ್ರೋಶ, ವಾಗ್ವಾದದ ಬಳಿಕ ಕ್ಷಮೆಯಾಚನೆ!

Prathinidhi News
Last updated: November 20, 2025 3:52 pm
Prathinidhi News
Published November 20, 2025
Share
SHARE

ಮೈಸೂರು, ನವೆಂಬರ್‌ 20, 2025 : ‘ಫುಲ್ ಮೀಲ್ಸ್’ ಕನ್ನಡ ಚಲನಚಿತ್ರದಲ್ಲಿ ‘ಫೋಟೋಗ್ರಾಫರ್ಸ್ ಪ್ಲರ್ಟ್ಸ್’ (Photographers Flirts) ಎಂಬ ‘ಅಸಂಬದ್ಧ’ ಪದವನ್ನು ಬಳಸಲಾಗಿದೆ ಎಂದು ಆಕ್ಷೇಪಿಸಿ, ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್‌ನ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಮತ್ತು ಅಸೋಸಿಯೇಷನ್ ಸದಸ್ಯರ ನಡುವೆ ವಾಗ್ವಾದ ನಡೆದು, ಅಂತಿಮವಾಗಿ ಚಿತ್ರತಂಡ ಕ್ಷಮೆಯಾಚಿಸಿದೆ.

ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್‌ನ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮುಖರು ಮಾತನಾಡಿದರು. ಚಲನಚಿತ್ರದಲ್ಲಿ ‘ಫೋಟೋಗ್ರಾಫರ್ಸ್ ಪ್ಲರ್ಟ್ಸ್’ ಎಂಬ ಪದವನ್ನು ಬಳಸಿದ್ದು, ಇದು ಛಾಯಾಗ್ರಾಹಕರಿಗೆ ನೇರ ಅಪಮಾನ ಮಾಡಿದಂತಿದೆ. ಇಂತಹ ಅಸಂಬದ್ಧ ಪದ ಬಳಕೆಯಿಂದ ಸಮಾಜದಲ್ಲಿ ಫೋಟೋಗ್ರಾಫರ್‌ಗಳ ಬಗ್ಗೆ ತಪ್ಪು ಭಾವನೆ ಮೂಡುತ್ತದೆ. ಆಕ್ಷೇಪಾರ್ಹ ಪದವನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದು ಹಾಕಿದ ನಂತರವೇ ಚಿತ್ರವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಚಿತ್ರ ಬಿಡುಗಡೆಯಾಗುವ ಮಂದಿರಗಳ ಬಳಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಯಾಗಿ, ಸುದ್ದಿಗೋಷ್ಠಿಯಲ್ಲಿದ್ದ ‘ಫುಲ್ ಮೀಲ್ಸ್’ ಚಲನಚಿತ್ರದ ನಿರ್ದೇಶಕ ಎನ್. ವಿನಾಯಕ್ ಅವರು ಸ್ಪಷ್ಟನೆ ನೀಡಿದರು. ಇಡೀ ಚಿತ್ರವು ಫೋಟೋಗ್ರಾಫರ್‌ಗಳ ಕುರಿತಾಗಿಯೇ ಮೂಡಿಬಂದಿದೆ. ‘ಫೋಟೋಗ್ರಾಫರ್ಸ್ ಪ್ಲರ್ಟ್ಸ್’ ಎಂಬ ಪದವನ್ನು ಕೇವಲ ಸಂದರ್ಭಕ್ಕೆ ಹಾಗೂ ಚಿತ್ರಕತೆಗೆ ತಕ್ಕಂತೆ ಬಳಸಲಾಗಿದೆಯೇ ಹೊರತು, ಛಾಯಾಗ್ರಾಹಕರಿಗೆ ಅಪಮಾನ ಮಾಡುವ ಯಾವುದೇ ಸನ್ನಿವೇಶಗಳು ಚಿತ್ರದಲ್ಲಿ ಇಲ್ಲ ಎಂದು ತಿಳಿಸಿದರು. ಈ ವೇಳೆ ಚಿತ್ರದ ನಾಯಕ ನಟ ಲಿಖಿತ್ ಶೆಟ್ಟಿ, ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ಸಹ ಉಪಸ್ಥಿತರಿದ್ದರು.

ಕೊನೆಗೆ ಕ್ಷಮೆಯಾಚಿಸಿದ ತಂಡ

ಸುದ್ದಿಗೋಷ್ಠಿ ಮುಗಿದ ಬಳಿಕ, ಪತ್ರಕರ್ತರ ಭವನದ ಬಳಿಯೇ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್‌ನ ಸದಸ್ಯರು ಮತ್ತು ‘ಫುಲ್ ಮೀಲ್ಸ್’ ಚಿತ್ರತಂಡದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳು ಚಿತ್ರತಂಡದ ಸದಸ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಮತ್ತು ಆಕ್ಷೇಪಾರ್ಹ ಪದದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದರು.ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ‘ಫುಲ್ ಮೀಲ್ಸ್’ ಚಿತ್ರ ತಂಡದ ಸದಸ್ಯರು ಅಸೋಸಿಯೇಷನ್‌ನ ಸದಸ್ಯರ ಬಳಿ ಕ್ಷಮೆಯಾಚಿಸಿದರು. ಈ ಘಟನೆಯಿಂದಾಗಿ ಚಲನಚಿತ್ರದ ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿಯಾಗಿದೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮಂಡ್ಯಮುಖಪುಟಮೈಸೂರು ನಗರ

ಶ್ರೀರಂಗಪಟ್ಟಣ: KRS ನಲ್ಲಿ ಮತ್ತೆ ಭದ್ರತಾ ಲೋಪ! ಅಧಿಕಾರಿಗಳು ‘ಡೋಂಟ್ ಕೇರ್’ – ಬೃಂದಾವನ ಗಾರ್ಡನ್ ನಲ್ಲಿ ಪ್ರಭಾವಿ ವ್ಯಕ್ತಿ ಸೈಕ್ಲಿಂಗ್..!

November 5, 2025
ನಂಜನಗೂಡುಮುಖಪುಟಮೈಸೂರು ಗ್ರಾಮಾಂತರ

ನಂಜನಗೂಡು: ಯುವಕನ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ 17 ವರ್ಷದ ಅಪ್ರಾಪ್ತೆ; ಕಿರಾತಕ ಆದಿತ್ಯನ ವಿರುದ್ಧ ಪ್ರಕರಣ ದಾಖಲು

January 8, 2026
ಕ್ರೈಂ ಸುದ್ದಿಗಳುಮುಖಪುಟಹಾಸನ

ಶಬರಿಮಲೆ ಯಾತ್ರೆಯಿಂದ ವಾಪಸ್ ಬಂದು ಪತ್ನಿಯನ್ನು ಕೊಲೆಗೈದ ಪತಿರಾಯ !

January 13, 2026
ಕ್ರೈಂ ಸುದ್ದಿಗಳುನಂಜನಗೂಡುಮುಖಪುಟ

ಮನೆ ಬಾಡಿಗೆ ನೆಪದಲ್ಲಿ ವೃದ್ಧೆಗೆ ಮಾರಣಾಂತಿಕ ಹಲ್ಲೆ, ಚಿನ್ನಾಭರಣ ದೋಚಿ ಪರಾರಿ

November 4, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?