ಮೈಸೂರು, ಜುಲೈ 22, 2026 : ಉತ್ತಮ ನಿಯಂತ್ರಣಾ ಮಾನದಂಡಗಳ ಪಾಲನೆಯೇ ಔಷಧ ಉದ್ಯಮದ ಯಶಸ್ಸಿನ ಮೂಲಾಧಾರ ಎಂದು ಮಾಜಿ ಉಪ ಔಷಧ ನಿಯಂತ್ರಕ ಡಾ.ದೇಬಬ್ರತ ರಾಯ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿಯ ಔಷಧಶಾಸ್ತ್ರ ವಿಭಾಗದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ರೆಗ್ಯುಲೇಟರಿ ಸೈನ್ಸಸ್ ವತಿಯಿಂದ ಸ್ಪಾರ್ಕಲ್ ಸಿನೆ ಸಹಯೋಗದಲ್ಲಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ನಡೆದ ಔಷಧೀಯ ಉತ್ಪಾದನಾ ಶ್ರೇಷ್ಠತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಔಷಧ ಉತ್ಪಾದನೆಗೆ ಉತ್ತಮ ಉತ್ಪಾದನಾ ಪದ್ಧತಿ ಅನುಸರಣೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅದಕ್ಕೆ ಬೇಕಾದ ನಿಯಮಾವಳಿ ರಚಿಸಬೇಕಿದೆ. ಇದರಿಂದ ಔಷಧೋದ್ಯಮ ಯಶಸ್ವಿಯಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಜಾಗತಿಕ ಅನುಸರಣೆ ಸವಾಲುಗಳು, ಅವಕಾಶಗಳು ಮತ್ತು ಭವಿಷ್ಯದ ದಿಕ್ಕುಗಳು ವಿಷಯದ ಕುರಿತು ನಡೆದ ಪ್ಯಾನೆಲ್ ಚರ್ಚೆಯಲ್ಲಿ ಬದಲಾಗುತ್ತಿರುವ ನಿಯಂತ್ರಣಾ ನಿರೀಕ್ಷೆಗಳು, ಉದ್ಯಮ ಎದುರಿಸುತ್ತಿರುವ ಪ್ರಾಯೋಗಿಕ ಸವಾಲುಗಳು ಹಾಗೂ ಭವಿಷ್ಯದಲ್ಲಿ ಲಭ್ಯವಾಗುವ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಉದ್ಯಮದ ಪ್ರತಿನಿಧಿಗಳಿಗೆ ಅಂತರರಾಷ್ಟಿçÃಯ ಮಾನದಂಡಗಳು, ನಿಯಂತ್ರಣಾ ಸಿದ್ಧತೆ, ಬಲಿಷ್ಠ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಹಾಗೂ ಔಷಯ ಉತ್ಪಾದನೆಯಲ್ಲಿ ಶ್ರೇಷ್ಠತೆ ಸಾಸುವ ಮಾರ್ಗಗಳ ಕುರಿತು ಪ್ರಾಯೋಗಿಕ ಹಾಗೂ ಸಮಕಾಲೀನ ಮಾಹಿತಿಯನ್ನು ನೀಡಲಾಯಿತು.
ಕಾರ್ಯಾಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಔಷಯ ಉದ್ಯಮದ ವೃತ್ತಿಪರರು ಭಾಗವಹಿಸಿದ್ದರು. ತಾಂತ್ರಿಕ ಅವೇಶನಗಳಲ್ಲಿ ಕರ್ನಾಟಕ ಸರಕಾರದ ಔಷಧ ನಿಯಂತ್ರಣ ಇಲಾಖೆಯ ಉಪ ಔಷಧ ನಿಯಂತ್ರಕ ಡಾ.ಜೆ. ಭಾಸ್ಕರನ್, ಮೈಕ್ರೋ ಲ್ಯಾಬ್ಸ್ ಗುಣಮಟ್ಟ ವಿಭಾಗದ ಸಹಾಯಕ ಉಪಾಧ್ಯಕ್ಷ ವೆಂಕಟೇಶ್ವರ ರಾವ್ ಹಾಗೂ ಹಿಮಾಲಯ ವೆಲ್‌ನೆಸ್ ಕಂಪನಿಯ ಗುಣಮಟ್ಟ ಭರವಸೆ ವಿಭಾಗದ ಮುಖ್ಯಸ್ಥ ಸುಧಾಕರ್.ಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಬಯೋಪ್ಲಸ್ ಲೈಫ್ ಸೈನ್ಸಸ್‌ನ ತಾಂತ್ರಿಕ ಮತ್ತು ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷೆ ಮರ‍್ರಿ ಜಾರ್ಜ್, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಉಪಪ್ರಾಂಶುಪಾಲ ಡಾ.ಜಿ.ವಿ.ಪೂಜಾ, ಔಷಧಶಾಸ್ತç ವಿಭಾಗದ ಮುಖ್ಯಸ್ಥ ಡಾ.ಎಚ್.ವಿ.ಗಂಗಾಧರಪ್ಪ ಹಾಗೂ ಡಾ.ಕೆ.ಬಂಗಾರುರಾಜನ್ ಇದ್ದರು.
