PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಮೈಸೂರು ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ; ಆರ್.ಸಿ.ಹೆಚ್ ಅಧಿಕಾರಿ ಡಾ: ಸಿರಾಜ್ ಮಾಹಿತಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಮೈಸೂರು ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ; ಆರ್.ಸಿ.ಹೆಚ್ ಅಧಿಕಾರಿ ಡಾ: ಸಿರಾಜ್ ಮಾಹಿತಿ
ಮುಖಪುಟಮೈಸೂರು ನಗರ

ಮೈಸೂರು ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ; ಆರ್.ಸಿ.ಹೆಚ್ ಅಧಿಕಾರಿ ಡಾ: ಸಿರಾಜ್ ಮಾಹಿತಿ

Prathinidhi News
Last updated: December 20, 2025 3:55 pm
Prathinidhi News
Published December 20, 2025
Share
SHARE

ಮೈಸೂರು, ಡಿಸೆಂಬರ್ 20, 2025 : ಜನವರಿ-2024 ರಿಂದ ಡಿಸೆಂಬರ್-2024 ರವರೆಗೆ 28 ತಾಯಿ ಮರಣ MMR Rate: 76.50 ಇದ್ದು, ಜನವರಿ-2025 ರಿಂದ ಡಿಸೆಂಬರ್-2025 ರವರೆಗೆ 11 ತಾಯಿ ಮರಣ ಹೊಂದಿದ್ದು, ಎಂ.ಎಂ.ಆರ್ ರೇಟ್ 30.20 ಗೆ ಇಳಿಕೆಯಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ: ಸಿರಾಜ್ ತಿಳಿಸಿದ್ದಾರೆ.

ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡಿ ಶೂನ್ಯಕ್ಕೆ ತರಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ.

ತಾಯಿಯ ಮರಣ (Maternal Death)ಎಂದರೆ ಗರ್ಭಧಾರಣೆ, ಹರಿಗೆ ಅಥವಾ ಹೆರಿಗೆಯ ನಂತರದ ಸಮಯದಲ್ಲಿ ಸಂಭವಿಸುವ ತಾಯಿಯ ಸಾವು. ಇದು ಗರ್ಭಧಾರಣೆಗೆ ಸಂಬಂಧಿತ ತೊಡಕುಗಳಿಂದ ಉಂಟಾಗುತ್ತದೆ. ತಾಯಿ ಮರಣಕ್ಕೆ ಮುಖ್ಯ ಕಾರಣಗಳಲ್ಲಿ ತೀವ್ರ ರಕ್ತಸ್ರಾವ, ಸೋಂಕುಗಳು, ಅಧಿಕ ರಕ್ತದೊತ್ತಡ, ಅಸುರಕ್ಷಿತ ಗರ್ಭಪಾತ ಮತ್ತು ಹೃದಯ ಸಂಬಂಧಿ ರೋಗಗಳು ಸೇರಿವೆ. ತಾಯಿ ಮರಣ ಪ್ರಮಾಣ ಹೆಚ್ಚಾದಲ್ಲಿ ಇದು ಕುಟುಂಬ ಹಾಗೂ ಸಮಾಜದ ಮೇಲೆ ಆರ್ಥಿಕ ಮತ್ತು ಭಾವನಾತ್ಮಕ ದುಷ್ಪರಿಣಾಮಗಳನ್ನು ಊಂಟಾಗುತ್ತದೆ.

ಜಿಲ್ಲೆಯಲ್ಲಿ 2024ರ ವರ್ಷದಲ್ಲಿ ಒಟ್ಟು 28 ತಾಯಿ ಮರಣ ಸಂಭವಿಸಿದ್ದು, 2025 ರ ವರ್ಷದಲ್ಲಿ ಒಟ್ಟು 12 ತಾಯಿ ಮರಣಗಳು ಸಂಭವಿಸಿದ್ದು ತಾಯಿ ಮರಣವನ್ನು ಗಣನೀಯ ಪ್ರಮಾಣದಲ್ಲಿ ತಡೆಗಟ್ಟುವಲ್ಲಿ ಬಹಳಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ತಾಯಿ ಕಾರ್ಡ್ ನ ಮಾಹಿತಿ ಅನುಸಾರ ಸಮಯ ಮತ್ತು ಸಂದರ್ಭದನ್ವಯ ರಕ್ತಹೀನತೆ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಂಪರ್ಕವಾಗಿ ಗರ್ಭೀರ್ಣಿ ಮಹಿಳೆಯರಿಗೆ ಒದಗಿಸುವುದು.

- ಜಾಹೀರಾತು -

ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರ ಸಮ್ಮುಖದಲ್ಲಿ ಜಿಲ್ಲಾಮಟ್ಟದ ತಾಯಿ ಮರಣ ಪರಿಶೋಧನಾ ಸಮಿತಿಸಭೆಗಳ ಆಯೋಜನೆ ಮತ್ತು ತಾಯಿ ಮರಣ ಪರಿಶೋಧನಾ ಸಮಿತಿಯ ನಿರ್ದೇಶನಗಳ ಪಾಲನೆ ಹಾಗೂ ಈ ಬಗ್ಗೆ ಕ್ಷೇತ್ರಮಟ್ಟದಲ್ಲಿ ಅನುಷ್ಠಾನ ಮಾಡುತ್ತಿರುವುದು.ಕೆ.ಪಿ.ಎಂ.ಇ.ಎ ಪ್ರಾಧಿಕಾರದಡಿಯಲ್ಲಿ ಬರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾಧಿಕಾರದ ಸಭೆಗಳಲ್ಲಿ ತಾಯಿ ಆರೋಗ್ಯ ಸಂಪರ್ಕವಾಗಿ ನಿರ್ವಹಣೆ ಮಾಡುವಲ್ಲಿ ನ್ಯೂನತೆಗಳು ಕಂಡು ಬಂದ ಖಾಸಗಿ ಆಸ್ಪತ್ರೆಗಳಿಗೆ ದಂಡವನ್ನು ವಿಧಿಸಲಾಗಿದೆ.

ತಾಯಿ ಮರಣ ಸಂಭವಿಸಿದಂತೆ ನಿಗದಿತ ಸಮಯದೊಳಗೆ ಸಮುದಾಯ ಮತ್ತು ಸಾಂಸ್ಥಿಕ ಪರಿಶೋಧನೆಗಳನ್ನು ನಿರ್ವಹಿಸುತ್ತಿರುವುದು ಹಾಗೂ ಈ ಬಗೆ ಕಂಡು ಬಂದ ನ್ಯೂನತೆಗಳ ಕುರಿತು ಕ್ಷೇತ್ರ ಮಟ್ಟದಲ್ಲಿ ಮಾಹಿತಿ ನೀಡುತ್ತಿರುವುದು.ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯಡಿಯಲ್ಲಿ ತಾಯಿ ಕಾರ್ಡ್ ಅನುಸಾರ ಸಾಮಾನ್ಯ ಗರ್ಭಿಣಿ ಮತ್ತು HRP ಗರ್ಭಿಣಿಯ ಆರೋಗ್ಯ ತಪಾಸಣೆ.ತುರ್ತು ಹೆರಿಗೆ ನ ನಿರ್ವಹಣೆಗೆ ಹಾಗೂ ಹೆಚ್ಆರ್.ಪಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಟ್ಸಾಫ್ ಗ್ರೂಫ್ ಗಳನ್ನು ಸೃಜಿಸಿ, ಆಮೂಲಕ ಮಾಹಿತಿಯನ್ನು ರವಾನಿಸಲಾಗುತ್ತಿದೆ.ಕ್ಷೇತ್ರ ಮಟ್ಟದ ಆಯಕಟ್ಟಿನ ಪ್ರದೇಶಗಳಲ್ಲಿ ತುರ್ತು ವಾಹನಗಳನ್ನು ನಿರ್ವಹಣೆಗೆ ಮಾಡುತ್ತಿದ್ದು ಇದರ ಸಂಪರ್ಣ ಮೇಲ್ವಿಚಾರಣೆಯನ್ನು ಜಿಲ್ಲಾಮಟ್ಟದಿಂದಲೇ ನಿರ್ವಹಿಸಲಾಗುತ್ತಿರುವುದು.

ಪ್ರತಿ ಮಾಹೆ ನಿರೀಕ್ಷಿತ ಗರ್ಭಿಣಿಯರ ಮಾಹಿತಿಯನ್ನು ಪಡೆದು ಈ ಮಾಹಿತಿಯನ್ನು ಅನುಸಾರ ನೇರ ಕಣ್ಗಾವಲಿನಲ್ಲಿರುವಂತೆ ವ್ಯವಸ್ಥೆ ಮಾಡಿರುವುದು.ಸಮುದಾಯ ಮಟ್ಟದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿ.ಹೆಚ್.ಎಸ್.ಎನ್.ಸಿ.. ವಿ.ಹೆಚ್.ಎನ್.ಡಿ ಮತ್ತು ಬಾಲ ವಿಕಾಸ ಸಮಿತಿಗಳ ಮೂಲಕ ಗರ್ಭಿಣಿಯರ ರ ಕುರಿತು ಪ್ರಸವ ಪೂರ್ವ ಮತ್ತು ಪ್ರಸನ ನಂತರದ ಮಾಹಿತಿಗಳನ್ನು ಕುರಿತು ಜಾಗೃತಿ ಮೂಡಿಸುತ್ತಿರುವುದು.ಕ್ಷೇತ್ರ ಮಟ್ಟದಿಂದ ಹೆಚ್ಚಿನ ಚಿಕಿತ್ಸೆಗೆ ರೆಫರ್ ಆಗುವ ಎಲ್ಲಾ ಪ್ರಕರಣಗಳ ಕುರಿತು (ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ) ನಿರಂತರ ಸಂಪರ್ಕದಲ್ಲಿ ತೊಡಗಿ ಕೊಂಡಿರುವುದು.

ರಾಜ್ಯ ಮಟ್ಟದ ಮಾರ್ಗಸೂಚಿಗಳ ಅನುಸಾರ ಹಾಗೂ ನಿರ್ದೇಶನದಂತೆ ಮತ್ತು ಜಿಲ್ಲಾ ಆಡಳಿತದ ಮಾರ್ಗದರ್ಶನದಂತೆ ಕ್ಷೇತ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವುದು.ಕಿಲ್ಕಾರಿ ಸಹಾಯವಾಣಿ ಸಂವಾದದ ಬಗ್ಗೆ ಹಾಗೂ ಸಹಾಯವಾಣಿಯನ್ನು ಆಲಿಸುವ ಬಗೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವುದು.ಹದಿಹರೆಯದ ಹೆಣ್ಣು ಮಕ್ಕಳ ಗರ್ಭವ್ಯವಸ್ಥೆಯ ಕುರಿತು ವಿಶೇಷ ಕಾಳಜಿ ಹಾಗೂ ಈ ಬಗ್ಗೆ, ಸಮುದಾಯದಲ್ಲಿ ಜಾಗೃತಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪ್ರಕರಣಗಳ ಕುರಿತು ಮಾಹಿತಿ ನೀಡುತ್ತಿರುವುದು.ಗರ್ಭಾವಸ್ಥೆಯ ಕನಿಷ್ಠ ಮೂರು ವರ್ಷಗಳ ಅಂತರದ ಬಗ್ಗೆ ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸುತ್ತಿರುವುದು. “ಜಿಲ್ಲಾ ಆಡಳಿತವು ಗರ್ಭಿಣಿ- ತಾಯಂದಿರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳ ಸಮನ್ವಯತೆಯಿಂದ ಹಾಗೂ ವಿನೂತನ ಕಾರ್ಯ ವಿಧಾನಗಳ ಮೂಲಕ, ತಪ್ಪಿಸಬಹುದಾದ ತಾಯಂದಿರ ಮರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರಿಗೆ ಸುರಕ್ಷಿತ ತಾಯಿನದ ಆರೋಗ್ಯ ಸೇವೆಯನ್ನು ನೀಡುವಲ್ಲಿ ನಾವು ಬದ್ಧರಾಗಿದ್ದೇವೆ.” ಎಂದು ತಿಳಿಸಿದರು.

 

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರ

ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ‘ಖಾಕಿ’ ಕಣ್ಗಾವಲು: ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಹದ್ದಿನ ಕಣ್ಣು

December 31, 2025
ಮುಖಪುಟಮೈಸೂರು ನಗರ

ಪ್ಲಾಸ್ಟಿಕ್ ಪ್ಯಾಕ್ ತ್ಯಜಿಸಿ ಪೇಪರ್ ಬ್ಯಾಗ್ ಬಳಸಿ ಸಾರ್ವಜನಿಕರಿಗೆ ಅರಿವು ಸಂಸ್ಥೆ ಜಾಗೃತಿ

January 28, 2026
ಮುಖಪುಟಮೈಸೂರು ನಗರ

ಮೈಸೂರು: ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ಗೆ ಪಾಲಿಕೆ ನೋಟಿಸ್ – ಅನಧಿಕೃತ ಕಟ್ಟಡ ತೆರವಿಗೆ ಸೂಚನೆ

February 5, 2026
ಮುಖಪುಟಮೈಸೂರು ನಗರ

ಮೈಸೂರು: ನಾಳೆ ಲಕ್ಷ ಕಂಠಗಳಿಂದ ಹನುಮಾನ್ ಚಾಲೀಸಾ ಪಠಣ; ಸಿದ್ದರಾಮಯ್ಯ ಸುದೀರ್ಘ ಕಾಲ ಸಿಎಂ ಆಗಿರಲಿ ಎಂದ ಶಾಸಕ ಹರೀಶ್ ಗೌಡ

February 13, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?