ಮಧ್ಯಪ್ರದೇಶ್, ಜನವರಿ 21, 2026: ಮಧ್ಯ ಪ್ರದೇಶದ ಇಂದೋರ್ ನ ಭಿಕ್ಷುಕನೊಬ್ಬ ಇದೀಗ ಇಡೀ ದೇಶದಲ್ಲಿ ಚರ್ಚೆಗೆ ಈಡಾಗಿದ್ದಾನೆ. ಭಿಕ್ಷುಕನನ್ನು ರಕ್ಷಿಸಿದ ಅಧಿಕಾರಿಗಳಿಗೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಮಂಗೀಲಾಲ್ ಎಂಬಾತನೇ ಭಿಕ್ಷುಕ ಕೋಟ್ಯಧಿಪತಿಯಾಗಿದ್ದಾನೆ.ಈ ಭಿಕ್ಷುಕನ ಬಳಿ 3 ಮನೆಗಳು, 2ಕಾರ್ ಹಾಗೂ ಮೂರು ಕೋಟಿಗೂ ಹೆಚ್ಚು ಹಣ ಇರೋದು ಗೊತ್ತಾಗಿದೆ. ಅಲ್ಲದೆ ಈತ ಓಡಾಡೋಕೆ ಕಾರ್ ಚಾಲಕ ನನ್ನು ಸಹ ಇಟ್ಟುಕೊಂಡಿದ್ದಾನೆ.
ಕೋಟ್ಯಂತರ ಮೌಲ್ಯದ ಸಂಪತ್ತನ್ನು ಸಂಗ್ರಹಿಸಿರುವ ಭಿಕ್ಷುಕ ಮಂಗಿಲಾಲ್ ಸದ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದಾನೆ. ಮಂಗಿಲಾಲ್ ವಿವಿಧ ಭಾಗಗಳಲ್ಲಿ ಮೂರು ಮನೆಗಳನ್ನು ಹೊಂದಿದ್ದಾರೆ. ಜನರಿಗೆ ಬಡ್ಡಿಗೆ ಸಾಲಗಳನ್ನು ಸಹ ಆತ ನೀಡುತ್ತಾರೆ ಎನ್ನಲಾಗಿದೆ
ಮಧ್ಯಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ‘ಇಂದೋರ್ ಭಿಕ್ಷುಕ ನಿರ್ಮೂಲನಾ ಅಭಿಯಾನ’ ಆರಂಭಿಸಲಾಗಿದೆ. ಕಾರ್ಯಾಚಾರಣೆ ವೇಳೆ ಭಿಕ್ಷಾಟನೆ ಮೂಲಕವೇ ಕೋಟ್ಯಂತರ ಮೌಲ್ಯದ ಸಂಪತ್ತನ್ನು ಸಂಗ್ರಹಿಸಿದ ಭಿಕ್ಷುಕ ಮಂಗಿಲಾಲ್ ಸಂಪತ್ತು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
ಇನ್ನೂ, ಮಂಗೀಲಾಲ್ ರಾಜ್ಯ ಸರ್ಕಾರ ಮತ್ತು ರೆಡ್‌ಕ್ರಾಸ್‌ನ ಸಂಯೋಜನೆಯಲ್ಲಿ ಜಾರಿಗೆ ತಂದ ಉಪಕ್ರಮ ಫಲಾನುಭವಿ ಸಹ ಆಗಿದ್ದಾರೆ. ಅವರಿಗೆ ಯೋಜನೆಯಡಿ ಒನ್ ಬಿಎಚ್‌ಕೆ ಮನೆ ನೀಡಲಾಗಿತ್ತು. ಹೀಗಿದ್ದರು ಅವರು ಭಿಕ್ಷಾಟನೆಯನ್ನು ನಿಲ್ಲಿಸಿರಲಿಲ್ಲ ಎನ್ನಲಾಗಿದೆ.
ಇಂದೋರ್‌ನ ಸರಾಫಾ ಬಜಾರ್ ಪ್ರದೇಶದಲ್ಲಿ ಹಲವು ಜನರಿಗೆ ಮಂಗಿಲಾಲ್ ಬಡ್ಡಿಗೆ ಹಣ ನೀಡುತ್ತಾರೆ. ಬಡ್ಡಿ ವಸೂಲಿಗೆಂದೆ ಆಗಾಗ ಸರಾಫಾಗೆ ಭೇಟಿ ನೀಡುತ್ತಾರೆ. ನಿತ್ಯವು ಅಲ್ಲಿನ ಜನರಿಗೆ ಸುಮಾರು 5000 ರೂಪಾಯಿವರೆಗೆ ಹಣ ಸಂಗ್ರಹಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
