ಮೈಸೂರು, ಮಾರ್ಚ್ 3, 2026 : ಬರ್ತ್ ಡೇ ಅಂದ್ರೆ ಪಾರ್ಟಿ,ಗುಂಡು ತುಂಡು ಮೋಜಿಮಸ್ತಿಯಲ್ಲಿ ಮುಳುಗುವ ಇಂದಿನ ಜನಾಂಗಕ್ಕೆ ಮೈಸೂರಿನ ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಕಶ್ಯಪ್ ಮಾದರಿಯಾಗಿದ್ದಾರೆ. ರಸ್ತೆ ಉಬ್ಬುಗಳಿಗೆ ಸ್ವಂತ ಹಣದಿಂದ ಬಣ್ಣ ಬಳಿದು ಸರಳವಾಗಿ ಅರ್ಥಪೂರ್ಣವಾಗಿ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ.

ಸಮಾಜ ಸೇವಕನ ಬರ್ತ್ ಡೇ ಆಚರಣೆ ಇದೀಗ ಇತರರಿಗೆ ಮಾದರಿಯಾಗಿದೆ. ಕಳೆದ ವರ್ಷ ಶ್ರೀಕಾಂತ್ ಕಶ್ಯಪ್ ರವರು ತಮ್ಮ ಬರ್ತ್ ಡೇ ದಿನ ಚಾಮುಂಡಿಬೆಟ್ಟಕ್ಕೆ ತಮ್ಮ ವಾಹನದಲ್ಲಿ ತೆರಳುವಾಗ ಚಾಮುಂಡಿಪುರಂ ವೃತ್ತದ ಬಳಿ ಇರುವ ಹಂಪ್ ನಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವರ್ಷ ತಮ್ಮ ಜನ್ಮದಿನಾಚರಣೆಯಂದು ಅದೇ ಹಂಪ್ ಗೆ ಬಣ್ಣ ಬಳಿದು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅರ್ಥಪೂರ್ಣವಾಗಿ ತಮ್ಮ ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದಾರೆ. ಜನ್ಮದಿನಾಚರಣೆಗಳಂದು ಮೋಜು ಮಸ್ತಿ ಮಾಡುವ ಬದಲು ಇಂತಹ ಉಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಕಾಂತ್ ಕಶ್ಯಪ್ ಇತರರಿಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಜಿನಗರ ಪಾಲಿಕಾ ಸದಸ್ಯರಾದ ಜಗದೀಶ್, ದೂರ ರಾಜಣ್ಣ, ಅಪೂರ್ವ ಸುರೇಶ್, ಜತ್ತಿ ಪ್ರಸಾದ್, ಸಂದೀಪ್ ಹಾಗೂ ಇನ್ನಿತರರು ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
