ಮೈಸೂರು, ಅ,23: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹಳ ದಿನಗಳ ಬಳಿಕ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು. ಈ ಹಿಂದೆ ದಸರಾ ಹಾಗೂ ವಾರ್ಷಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದರೂ, ಬರಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು. ಇಂದು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಚನ ಪಡೆದು, ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ, ಮಠಕ್ಕೆ ಬಂದ ಜನರನ್ನು ಭೇಟಿಯಾದರು. ಮೈಸೂರಿನಲ್ಲಿ ದೀರ್ಘಕಾಲ ಉಳಿದುಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, ಮೈಸೂರು ತಮ್ಮ ಸ್ವಂತ ಮನೆಯಾಗಿದೆ ಎಂದು ಹೇಳಿದರು. ತಮ್ಮ ಮಗ ಯತೀಂದ್ರ 11 ದಿನಗಳ ನವರಾತ್ರಿ ಅವಧಿಯಲ್ಲಿ ಇಲ್ಲೇ ಇದ್ದ ಕಾರಣ ತಾವು ಸಹ ಮೈಸೂರಿನಲ್ಲಿ ಉಳಿದುಕೊಂಡಿದ್ದಾಗಿ ಸ್ಪಷ್ಟಪಡಿಸಿದರು.
ಮಗ ಯತೀಂದ್ರ ನೇತೃತ್ವದಲ್ಲಿ ನಡೆದ ದಸರಾ ಹೇಗಾಯಿತು ಎಂದು ಕೇಳಿದಾಗ, ತಾವು ಹೊರಗಡೆಯಿಂದ ನೋಡಿಲ್ಲ ಎಂದು ಹೇಳಿ, “ನೀವೇ ಹೇಳಬೇಕು” ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು. ಬಳಿಕ ಸುದ್ದಿಗಾರರು “ಚೆನ್ನಾಗಿ ಆಯ್ತು ದಸರಾ, ಬಹಳ ಚೆನ್ನಾಗಿ ಆಗಿದೆ” ಎಂದು ಹೇಳಿದಾಗ, ಸಿದ್ಧರಾಮಯ್ಯ ಅದನ್ನು ಒಪ್ಪಿಕೊಂಡರು. ಜನ ಬಂದಿದ್ದಾರೆ, ತಮ್ಮ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದಾಗ, ದಸರಾ ಯಾವಾಗಲೂ ನಾಡಹಬ್ಬವಾಗಿದ್ದು, ನಮ್ಮ ಸಂಸ್ಕೃತಿ, ಕನ್ನಡ ನಾಡಿನ ಅಭಿವೃದ್ಧಿ, ಸಂಗೀತ, ನಾಟಕ, ನೃತ್ಯ ಇವುಗಳ ಬಗ್ಗೆ ವ್ಯಕ್ತಪಡಿಸುವ ಕೆಲಸ ಎಂದರು.
ಸುತ್ತೂರು ಶಾಖಾ ಮಠಕ್ಕೆ ಸಿದ್ದರಾಮಯ್ಯ ಭೇಟಿ.. ಶ್ರೀಗಳ ಜತೆ ಚರ್ಚೆ..!
Leave a Comment
