PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ಹರಸಾಹಸ, ಮತ್ತೆ ದರ್ಶನ್​​ಗೆ ಹಿನ್ನಡೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ಹರಸಾಹಸ, ಮತ್ತೆ ದರ್ಶನ್​​ಗೆ ಹಿನ್ನಡೆ
ಜಿಲ್ಲೆಬೆಂಗಳೂರುಮುಖಪುಟಸಿನಿಮಾ

ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ಹರಸಾಹಸ, ಮತ್ತೆ ದರ್ಶನ್​​ಗೆ ಹಿನ್ನಡೆ

Prathinidhi News
Last updated: September 26, 2026 7:13 pm
Prathinidhi News
Published September 26, 2026
Share
SHARE

ಬೆಂಗಳೂರು : ಪ್ರದೋಶ್ ಮಾಫಿ ಸಾಕ್ಷಿ ಆಗಿ ಬದಲಾಗಿರುವುದು ರೇಣುಕಾ ಸ್ವಾಮಿ ಪ್ರಕರಣಕ್ಕೆ ಬಹುದೊಡ್ಡ ತಿರುವು ನೀಡಿದೆ. ದರ್ಶನ್​​ಗಂತೂ ಪ್ರದೋಶ್​​ ಅವರ ಮಾಫಿ ಸಾಕ್ಷಿಯಿಂದ ದೊಡ್ಡ ಹಿನ್ನಡೆ ಆಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಪ್ರದೋಶ್ ಅವರ ಮಾಫಿ ಸಾಕ್ಷಿ ತಡೆಯಲು ದರ್​ಶನ್ ಹಾಗೂ ಅವರ ವಕೀಲರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರದೋಶ್ ಅವರ ಮಾಫಿ ಸಾಕ್ಷಿಯನ್ನು ತಡೆಯುವ ನಾನಾ ಯತ್ನ ಮಾಡಿಕೊಂಡೇ ಬರಲಾಗುತ್ತಿದೆ. ಇತ್ತೀಚೆಗಷ್ಟೆ ವಿಚಾರಣಾ ನ್ಯಾಯಾಲಯವು ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ಸೆಪ್ಟೆಂಬರ್ 28ರ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಇದೀಗ ದರ್ಶನ್ ಪರ ವಕೀಲರು ಮತ್ತೊಮ್ಮೆ ಹೊಸ ಅರ್ಜಿ ದಾಖಲಿಸಿದ್ದಾರೆ.

ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ದರ್ಶನ್ ಪರ ವಕೀಲರು ಹೈಕೋರ್ಟ್​​ಗೆ ಅರ್ಜಿ ಹಾಕಿದ್ದರು. ಅಲ್ಲಿಯೂ ಸಹ ಹಿನ್ನಡೆ ಆಗಿದೆ. ಆದರೆ ಇತ್ತೀಚೆಗೆ ವಿಚಾರಣಾ ನ್ಯಾಯಾಲಯದಲ್ಲಿ ಈ ಬಗ್ಗೆ ವಾದ ಮಂಡಿಸುವಾಗ ಹೈಕೋರ್ಟ್​​ ಆದೇಶದ ಪ್ರತಿಯನ್ನು ಶನಿವಾರದ ಒಳಗೆ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ಹೇಳಲಾಗಿತ್ತು. ಅಲ್ಲದೆ, ಅದೇ ದಿನ ವಾದ ಮಂಡಿಸಿದ್ದ ಹಷ್ಮತ್ ಪಾಷಾ ಅವರು ತಾವು ಪ್ರದೋಶ್ ಮಾಫಿ ಸಾಕ್ಷಿ ಕುರಿತಾಗಿ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಿರುವುದಾಗಿಯೂ ಹೇಳಿದ್ದರು. ಇದೀಗ ಈ ಎರಡೂ ಕಾರಣಗಳನ್ನು ಪ್ರಧಾನವಾಗಿರಿಸಿಕೊಂಡು ಹೊಸ ಅರ್ಜಿಯನ್ನು ವಕೀಲರು ಸಲ್ಲಿಸಿದ್ದಾರೆ.

ತಮಗೆ ಇನ್ನೂ ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ ಹಾಗೂ ಪ್ರದೋಶ್ ಮಾಫಿ ಸಾಕ್ಷಿ ವಿರುದ್ಧವಾಗಿ ತಾವು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಲಿರುವ ಕಾರಣ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ಒಂದು ವಾರ ಗಡುವು ನೀಡಬೇಕು ಎಂದು ಕೋರಿದ್ದಾರೆ. ಆ ವರೆಗೆ ಬೇರ ಸಾಕ್ಷಿಗಳ ವಿಚಾರಣೆಗಳನ್ನು ಬೇಕಾದರೆ ವಿಚಾರಣೆ ನಡೆಸಿರಿ, ಆದರೆ ಪ್ರದೋಶ್ ಸಾಕ್ಷಿ ಹೇಳಿಕೆಯನ್ನು ಒಂದು ವಾರದ ವರೆಗೆ ಮುಂದೂಡಿ ಎಂದು ಮನವಿ ಸಲ್ಲಿಸಿದ್ದಾರೆ.

TAGGED:#DARSHANpradosh
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಬೆಂಗಳೂರುಮುಖಪುಟರಾಜಕೀಯ

ಆರ್ಥಿಕ ಸುಧಾರಣೆಗೆ ಸಂಪನ್ಮೂಲ ಕ್ರೋಢೀಕರಣ ಸಮಿತಿ ವರದಿ ಸಲ್ಲಿಕೆ

November 7, 2025
ಕ್ರೈಂ ಸುದ್ದಿಗಳುಬೆಂಗಳೂರುಮುಖಪುಟ

ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಂಜಿನಿಯರ್ ಹಾಗೂ ಆಟೋ ಚಾಲಕನ ಬಂಧನ

January 2, 2026
ಮುಖಪುಟಮೈಸೂರು ನಗರ

ಮೈಸೂರು ತಹಶೀಲ್ದಾರ್ ವಿರುದ್ಧ ಗಂಭೀರ ಆರೋಪ: 80 ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಯತ್ನ

December 2, 2025
ಮುಖಪುಟಮೈಸೂರು ಗ್ರಾಮಾಂತರ

ಬಡಗಲಪುರ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಶಿಬಿರ ತಾಲ್ಲೂಕು ಆರೋಗ್ಯಧಿಕಾರಿ ಡಾ ” ರವಿಕುಮಾರ

January 8, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?