ಚಿಕ್ಕಮಗಳೂರು, ಫೆಬ್ರವರಿ 16,2026: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ತಾಯಿ ಟಿವಿ ನೋಡುವುದನ್ನು ಕಡಿಮೆ ಮಾಡುವಂತೆ ಬೈದಿದ್ದಕ್ಕೆ ಮನನೊಂದ ಏಳನೇ ತರಗತಿಯ ವಿದ್ಯಾರ್ಥಿನಿ ಸುಪ್ರಿತಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನ ಊಟದ ವಿರಾಮಕ್ಕೆ ಮನೆಗೆ ಬಂದಿದ್ದಾಗ, ಸುಪ್ರಿತಾ ಟಿವಿ ನೋಡುತ್ತಾ ಊಟ ಮಾಡುವ ಭರದಲ್ಲಿ ಆಕಸ್ಮಿಕವಾಗಿ ತಟ್ಟೆ ಬೀಳಿಸಿ ಅನ್ನವನ್ನು ಚೆಲ್ಲಿದ್ದಾಳೆ. ಇದನ್ನು ಗಮನಿಸಿದ ತಾಯಿ, ಟಿವಿ ನೋಡುವುದನ್ನು ಬಿಟ್ಟು ಸರಿಯಾಗಿ ಊಟ ಮಾಡುವಂತೆ ಬುದ್ಧಿ ಹೇಳಿದ್ದಲ್ಲದೆ, ಚೆಲ್ಲಿರುವ ಅನ್ನವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿ ಮರಳಿ ಕೆಲಸಕ್ಕೆ ತೆರಳಿದ್ದರು.
ಆದರೆ ತಾಯಿಯ ಮಾತಿನಿಂದ ತೀವ್ರವಾಗಿ ಬೇಸರಗೊಂಡ ಬಾಲಕಿ, ಅವರು ಹೋದ ಬೆನ್ನಲ್ಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ವೇಲ್‌ನಿಂದ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
