ಮೈಸೂರು, ಫೆಬ್ರವರಿ 2, 2026 : ನಗರದ 23ನೇ ವಾರ್ಡಿನ ಮಡಿವಾಳರ ಬೀದಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹರೀಶ್ ಗೌಡ ಅವರು, ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕರು, ಸಮಾಜದ ಸುಧಾರಣೆಗೆ ಮಾಚಿದೇವರ ಕೊಡುಗೆ ಅಪಾರ ಎಂದು ಸ್ಮರಿಸುತ್ತಾ, ನೆರೆದಿದ್ದ ಸಾರ್ವಜನಿಕರಿಗೆ ಜಯಂತಿಯ ಶುಭಾಶಯಗಳನ್ನು ಕೋರಿದರು. ಇದೇ ಸಂದರ್ಭದಲ್ಲಿ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಶಾಸಕರ ಸಮ್ಮುಖದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು.
ಈ ಶುಭ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ನಾಗೇಶ್, ಸಿಮೆಂಟ್ ರವಿ, ರವಿಕುಮಾರ್, ರವೀಂದ್ರ, ರವೀನಂದನ್, ಸಿದ್ದೇಶ್, ಸತೀಶ್, ಜಗದೀಶ್, ತೇಜಾ ಸೇರಿದಂತೆ ವಾರ್ಡಿನ ಪ್ರಮುಖರು ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.
