ತುಮಕೂರು, ಜನವರಿ 14, 2026 : ತಾಯಿಗೆ ಮಲ ತಂದೆ ಹೊಡೆದ ಎಂಬ ಕಾರಣಕ್ಕೆ ತುಮಕೂರಿನಲ್ಲಿ ತಂದೆಯನ್ನೇ ಬರ್ಬರ ಹತ್ಯೆ ಮಾಡಲಾಗಿದ್ದು, ಭೀಕರ ಹತ್ಯೆ ಬಳಿಕ ಶವದ ಮುಂದೆ ಕುಳಿತು ಆರೋಪಿ ವಿಕೃತಿ ಮೆರೆದಿದ್ದಾನೆ.
ನಿತಿನ್ ತುಳಸಿರಾಮ್ (40) ಕೊಲೆಯಾದ ವ್ಯಕ್ತಿ. ಮಲಮಗ ಹರೀಶ್ (20) ಎಂಬಾತನಿಂದ ಕೃತ್ಯ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡಗೆರೆಯ ಮಾರನಗೆರೆಯಲ್ಲಿ ಘಟನೆ ನಡೆದಿದ್ದು, ಮಂಗಳವಾರ ತಡರಾತ್ರಿ 1 ಗಂಟೆ ಸುಮಾರಿಗೆ ಆರೋಪಿ ಕೃತ್ಯ ಎಸಗಿದ್ದಾನೆ. ಎಂದು ಗುರುತಿಸಲಾಗಿದೆ. ಈತ ಮೂಲತಃ ಮಹಾರಾಷ್ಟ್ರದ ರಾಯಗಡದ ವ್ಯಕ್ತಿ ಎಂದು ತಿಳಿದುಬಂದಿದೆ.
ಕಳೆದ ಮೂರು ವರ್ಷದ ಹಿಂದೆ ಯಶೋಧ ಎಂಬಾಕೆಗೆ ನಿತಿನ್ ಜೊತೆ ಎರಡನೇ ವಿವಾಹವಾಗಿತ್ತು. ಈ ಹಿಂದೆ ಬೇರೊಂದು ಮದುವೆಯಾಗಿದ್ದ ಯಶೋಧಗೆ ಇಬ್ಬರು ಮಕ್ಕಳಿದ್ದರು. ಕಳೆದ ಹತ್ತು ವರ್ಷದ ಹಿಂದೆ ಯಶೋಧ ಮೊದಲ ಪತಿ ಮೃತಪಟ್ಟಿದ್ದರು. ನಿತಿನ್ ಜೊತೆ ಮದುವೆ ಬಳಿಕ ಮಗ ಹರೀಶ್ ಗೆ ಕೋಪ ಇತ್ತು. ನಿನ್ನೆ ರೇಷನ್ ವಿಚಾರವಾಗಿ ತಾಯಿ ಯಶೋಧ ಜೊತೆ ನಿತಿನ್ ಜಗಳ ವಾಡಿದ್ದನು. ಈ ವೇಳೆ ಮಧ್ಯಪ್ರವೇಶಿಸಿದ ಹರೀಶ್ ನಿಂದ ಹಲ್ಲೆ ಮಾಡಲಾಗಿದೆ.
ತಾಯಿಗೆ ಹೊಡೆದ ಎಂಬ ಕಾರಣಕ್ಕೆ ಕೊಲೆ ನಡೆದಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ. ದಾಖಲಾಗಿದೆ.ಆರೋಪಿ ಹರೀಶ್ ಬಂಧಿಸಿದ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.
