ಅರಸೀಕೆರೆ, ಜನವರಿ 13, 2026: “ಇದು ಬರಿ ಮಾತಲ್ಲ, ರಾಜಕೀಯ ಮಹಾಭಾರತದ ಘೋಷಣೆ. ಅರಸೀಕೆರೆಯಲ್ಲಿ ನೆಲೆ ಇಲ್ಲದವರು ಇಲ್ಲಿ ಬಂದು ಸ್ಪರ್ಧಿಸುವ ಕನಸು ಕಾಣುತ್ತಿದ್ದಾರೆ. ತಾಕತ್ತಿದ್ದರೆ 2028ರ ಚುನಾವಣೆಗೆ ಅರಸೀಕೆರೆಯಿಂದಲೇ ಸ್ಪರ್ಧಿಸಿ, ಇಲ್ಲಿನ ಜನರೇ ನಿಮಗೆ ಉತ್ತರ ನೀಡುತ್ತಾರೆ,” ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ನೇರ ಪಂಥಾಹ್ವಾನ ನೀಡಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಚರಣಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದ ಅವರು, ಅರಸೀಕೆರೆ ನಿಮ್ಮ ಆಸ್ತಿಯಲ್ಲ: “ಐವತ್ತು ಜನರನ್ನು ಹಿಂದೆ ಹಾಕಿಕೊಂಡು ಬಂದು ಅರಸೀಕೆರೆಯಲ್ಲಿ ಸಭೆ ಮಾಡಿದರೆ ಇಲ್ಲಿನ ಬಿ ಹೆದರುವುದಿಲ್ಲ. ಅರಸೀಕೆರೆಗೆ ನೀವು ಮಾಡಿರುವ ಕೊಡುಗೆ ಶೂನ್ ನಾನು ಸೋತ ನಂತರ ಈ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ. ನನ್ನ ವೈಯಕ್ತಿಕ ಶಕ್ತಿ ಮತ್ತು ಜನರ ವಿಶ್ವಾಸದಿಂದ ನಾನು ಗೆದ್ದಿದ್ದೇನೆ ಹೊರತು ನಿಮ್ಮಿಂದಲ್ಲ.”
ಅಭಿವೃದ್ಧಿ ರಾಜಕಾರಣ: “ಕ್ಷೇತ್ರದ ಅಭಿವೃದ್ಧಿಗಾಗಿ ನಾನು
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಕಾಲು ಹಿಡಿದು ಅನುದಾನ ತಂದಿದ್ದೇನೆ. ಅರಸೀಕೆರೆಗೆ ಮಂಜೂರಾಗಿದ್ದ ಇಂಜಿನಿಯರಿಂಗ್ ಕಾಲೇಜನ್ನು ರಾತ್ರೋರಾತ್ರಿ ಮೊಸಳೆಹೊಸಳ್ಳಿಗೆ ಹೊತ್ತೊಯ್ದ ಇತಿಹಾಸ ನಿಮ್ಮದು. ನಾನು ಮಾಡಿರುವ ಕೆಲಸಗಳ ಪಟ್ಟಿಯನ್ನು ಶೀಘ್ರವೇ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡುತ್ತೇನೆ. ಹಾಗೂ ಎತ್ತಿನಹೊಳೆ ನೀರು ಬಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದಿರಲ್ಲವೇ? ಬರುವ ಜೂನ್ ತಿಂಗಳಿಗ ನೀರು ಬಂದು ಕೆರೆಗಳು ತುಂಬಲಿವೆ. ಆಗ ನಿಮ್ಮ ಮಾತಿನಂತೆ ನಡೆದುಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದರು. ವಂಶಪಾರಂಪರ್ಯ ರಾಜಕಾರಣಕ್ಕೆ ಟಾಂಗ್: “ಬರೀ ನೀವು, ನಿಮ್ಮ ಮನೆ, ನಿಮ್ಮ ಮನೆತನ ಅಷ್ಟೇ ಬೆಳೆಯಬೇಕೇ? ಹಾಸನ ಜಿಲ್ಲೆಯಲ್ಲಿ ಬೇರೆಯವರು ಬೆಳೆಯಬಾರದೇ? ನಾನು ಕಾಂಗ್ರೆಸ್‌ಗೆ ಕದ್ದುಮುಚ್ಚಿ ಹೋಗಿಲ್ಲ, ಅರಸೀಕೆರೆಯ ಜನರಿಗಾಗಿ ಬಹಿರಂಗವಾಗಿಯೇ ನಿರ್ಧಾರ ತಳೆದಿದ್ದೇನೆ. ನಮ್ಮ ಅಪ್ಪ ಹೆಬ್ಬೆಟ್ಟು ಒತ್ತುವ ರೈತ ಇರಬಹುದು, ಆದರೆ ಹೊಲದಲ್ಲಿ ಸಾಲು ಹೊಡೆಯುವುದು ನಮಗೆ ಗೊತ್ತು. ಅರಸೀಕೆರೆ ಜನ ಪ್ರಬುದ್ಧರಾಗಿದ್ದಾರೆ, ಹಿಂದಿನ ರೀತಿ ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಾನು ಇರುವವರೆಗೂ ಈ ಕ್ಷೇತ್ರದಲ್ಲಿ ನಿಮ್ಮ ಆಟ ನಡೆಯದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ನುಡಿದರು.
ಚುನಾವಣಾ ಕಣ ಸಜ್ಜು:
2028ರ ಚುನಾವಣೆಯಲ್ಲಿ ಎಚ್.ಡಿ. ರೇವಣ್ಣ ಅವರು ಅರಸೀಕೆರೆಯಿಂದ ಸ್ಪರ್ಧಿಸಬೇಕೆಂದು ಜೆಡಿಎಸ್ ಮುಖಂಡರು ಒತ್ತಾಯಿಸುತ್ತಿರುವ ಬೆನ್ನಲ್ಲೇ, ಶಿವಲಿಂಗೇಗೌಡರು ನೀಡಿರುವ ಈ ‘ರಣಕಳೆ’ ಹೇಳಿಕೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. “ಒಕ್ಕಲಿಗರು ದೇವೇಗೌಡರನ್ನು ಬಿಟ್ಟು ವೋಟು ಹಾಕಲ್ಲ ಎನ್ನುತ್ತಿದ್ದವರು, ನನಗೆ ಯಾಕೆ ಮತ ಹಾಕಿದರು ಎಂದು ಯೋಚಿಸಿ ಹೇಳಿದರು.
