PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಕ್ರಿಸ್ಮಸ್‌ ಹಿನ್ನೆಲೆ ಗಗನಕ್ಕೇರಿದ ಮೊಟ್ಟೆ ಬೆಲೆ – ಬಿಸಿಯೂಟದ ಜವಾಬ್ದಾರಿ ಹೊತ್ತ ಶಿಕ್ಷಕರ ಜೇಬಿಗೆ ಬಿತ್ತು ಕತ್ತರಿ !
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಬೆಂಗಳೂರು > ಕ್ರಿಸ್ಮಸ್‌ ಹಿನ್ನೆಲೆ ಗಗನಕ್ಕೇರಿದ ಮೊಟ್ಟೆ ಬೆಲೆ – ಬಿಸಿಯೂಟದ ಜವಾಬ್ದಾರಿ ಹೊತ್ತ ಶಿಕ್ಷಕರ ಜೇಬಿಗೆ ಬಿತ್ತು ಕತ್ತರಿ !
ಬೆಂಗಳೂರುಮುಖಪುಟ

ಕ್ರಿಸ್ಮಸ್‌ ಹಿನ್ನೆಲೆ ಗಗನಕ್ಕೇರಿದ ಮೊಟ್ಟೆ ಬೆಲೆ – ಬಿಸಿಯೂಟದ ಜವಾಬ್ದಾರಿ ಹೊತ್ತ ಶಿಕ್ಷಕರ ಜೇಬಿಗೆ ಬಿತ್ತು ಕತ್ತರಿ !

Prathinidhi News
Last updated: December 10, 2025 2:06 pm
Prathinidhi News
Published December 10, 2025
Share
SHARE

ಮೈಸೂರು , ಡಿಸೆಂಬರ್‌ 10, 2025 : ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಮೊಟ್ಟೆಗಳ ರೇಟ್ ಗಗನಕ್ಕೇರಿದೆ. ಇದ್ರಿಂದಾಗಿ ಶಾಲಾ ಬಿಸಿಯೂಟದಲ್ಲಿ ಮಕ್ಕಳಿಗೆ ನೀಡಲಾಗುವ ಮೊಟ್ಟೆ ವಿತರಣೆ ಜವಾಬ್ದಾರಿ ಹೊತ್ತಿರೋ ಶಿಕ್ಷಕರಿಗೆ ಸಂಕಷ್ಟ ಎದುರಾಗಿದೆ.

ಕೇಕ್ ಗಳಿಗೆ ಹಾಗೂ ಇತರೆ ಪದಾರ್ಥಗಳಿಗೆ ಮೊಟ್ಟೆಗಳನ್ನು ಹೆಚ್ಚಾಗಿ ಬಳಸುತ್ತಾರೆ.ಕಳೆದ ಎರಡು ವಾರಗಳಿಂದೀಚೆಗೆ ಕೋಳಿ ಮೊಟ್ಟೆ ಧಾರಣೆಯಲ್ಲಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಬಿಸಿಯೂಟದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶಿಕ್ಷಕರಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ.

ಹೊರಗಡೆ ಮೊಟ್ಟೆಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಮೊಟ್ಟೆ ದರವೂ ದಿಢೀ‌ರ್ ಎಂದು ಏರಿಕೆಯಾಗಿದೆ. ಆದರೆ, ಈ ಏರಿಕೆಯ ದರವನ್ನು ಹೊಂದಾಣಿಕೆ ಮಾಡಿಕೊಂಡು ಮಕ್ಕಳಿಗೆ ಮೊಟ್ಟೆಯನ್ನು ಕೊಡಬೇಕಾಗಿರುವುದರಿಂದ ಶಿಕ್ಷಕರು ತಮ್ಮ ಕೈಯಿಂದ ಹೆಚ್ಚುವರಿ ಹಣವನ್ನು ಸದ್ದಿಲ್ಲದೆ ಭರಿಸುತ್ತಿದ್ದಾರೆ.

ಸರ್ಕಾರವು ಬಿಸಿಯೂಟದ ಎಲ್ಲ ಸಾಮಗ್ರಿಗಳಿಗೂ ಇಂತಿಷ್ಟೇ ಹಣ ಎಂದು ನಿಗದಿ ಮಾಡಿದೆ. ಇದರ ಅನ್ವಯ ಮೊಟ್ಟೆ ಖರೀದಿಗೆ 5 ರೂಪಾಯಿ, ಸಾಗಾಣಿಕೆ ದರ 20 ಪೈಸೆ, ಮೊಟ್ಟೆಯನ್ನು ಸುಲಿಯುವುದಕ್ಕೆ 30 ಪೈಸೆ, ಇದಕ್ಕೆ ಅಡುಗೆ ಅನಿಲ ಖರ್ಚು 50 ಪೈಸೆ ಎಂದು ನಿಗದಿಗೊಳಿಸಿದೆ. ಅಂದರೆ ಮಾರುಕಟ್ಟೆಯಲ್ಲಿ ಖರೀದಿ ಮತ್ತು ಸಾಗಾಣಿಕೆ ದರ ಎರಡೂ ಸೇರಿದರೆ 5.20 ರೂಪಾಯಿ ನಿಗದಿಯಾಗಿದೆ. ಆದರೆ, ಪ್ರಸ್ತುತ ದಿನದಲ್ಲಿ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 7.50ರಿಂದ 8 ರೂಪಾಯಿವರೆಗೂ ದರ ಮುಟ್ಟಿದೆ. ಈ ಹೆಚ್ಚುವರಿ ಹಣವನ್ನು ಬಿಸಿಯೂಟದ ಜವಾಬ್ದಾರಿ ವಹಿಸಿಕೊಂಡಿರುವ ಮುಖ್ಯ ಶಿಕ್ಷಕರು ಮಾತನಾಡದೇ ತಮ್ಮ ಜೇಬಿನಿಂದಲೇ ತೆಗೆದುಕೊಡಬೇಕಾಗಿದೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರರಾಜಕೀಯ

ಮೈಸೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ: ಫೆ. 18ರಿಂದ ನಿಖಿಲ್ ಕುಮಾರಸ್ವಾಮಿ ಅಬ್ಬರದ ಪ್ರವಾಸ

February 16, 2026
ಮುಖಪುಟಮೈಸೂರು ನಗರ

ಹೊಸ ವರ್ಷದ ಸಂಭ್ರಮ: ಚಾಮುಂಡಿಬೆಟ್ಟದಲ್ಲಿ ಭಕ್ತಸಾಗರ

January 1, 2026
ಮುಖಪುಟಮೈಸೂರು ನಗರಸಿನಿಮಾ

2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ: ರಾಘವೇಂದ್ರ ರಾಜ್‌ಕುಮಾರ್ ಮತ್ತು ಮೇಘನಾ ರಾಜ್‌ಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ!

November 4, 2025
ಮುಖಪುಟಮೈಸೂರು ನಗರಸಿನಿಮಾ

“ಪ್ರತಿ ನಿತ್ಯ ಅನ್ನ ಕೊಡುವವರೇ ಅನ್ನದಾತರು, ವರ್ಷಕ್ಕೊಮ್ಮೆ ಕೊಡುವವರಲ್ಲ”: ನಟ ದರ್ಶನ್‌ಗೆ ನಿರ್ಮಾಪಕ ಉಮಾಪತಿ ಪರೋಕ್ಷ ಟಾಂಗ್!

November 4, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?