ವಿಜಯಪುರ, ಡಿಸೆಂಬರ್ 8, 2025 : ವಿಜಯಪುರದ (Vijayapura) ಹೊನ್ನುಟಗಿ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ.
ಮೂಢ ನಂಬಿಕೆಗೊಳಗಾಗಿದ್ದ ಪತಿ, ಮೂರು ಹೆಣ್ಣು ಮಕ್ಕಳು ಹೆತ್ತ ಕಾರಣ ಗಂಡು ಮಗುವಿಗಾಗಿ ಮಾಟಗಾತಿಯ ಮಾತಿನಂತೆ ಮಹಿಳೆಯ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ.
ಘಟನೆಯ ಬಳಿಕ ರಕ್ತಸ್ರಾವದಿಂದ ಬಳಲಿದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ದೂರು ದಾಖಲಿಸಿದ್ದಾರೆ.
ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಮತ್ತು ಡುಂಡೇಶ್ ವಿವಾಹವಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಗಂಡು ಮಗು ಬೇಕೆಂಬ ಆಸೆ ಹೊಂದಿದ್ದ ದುಂಡೇಶ್ ಮತ್ತು ಆತನ ತಂದೆ ತಾಯಿ, ಜ್ಯೋತಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇನ್ನು, ಗಂಡು ಮಗುವಿನ ಆಸೆಗಾಗಿ ಮಾಟಗಾತಿಯೊಬ್ಬಳನ್ನು ಸಂಪರ್ಕಿಸಿದ್ದ ಕುಟುಂಬ ಆಕೆಯ ಮಾತಿನಂತೆ ಕೂದಲು ಕಟ್ ಮಾಡಿದ್ದಾರೆ. ಮಾಟಗಾತಿ ನಿನ್ನ ಪತ್ನಿಯ ಮೈಯಲ್ಲಿ ದೆವ್ವವಿದೆ. ಇದೇ ಕಾರಣದಿಂದ ನಿಮಗೆ ಗಂಡು ಮಗು ಪಡೆಯಲು ಸಾಧ್ಯವಾಗುತ್ತಿಲ್ಲ. ದೆವ್ವ ಬಿಡಿಸಬೇಕಾದರೆ ಆಕೆಯ ನೆತ್ತಿಯ ಭಾಗದಲ್ಲಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕೆಂದು ದುಂಡೇಶ್ಗೆ ಹೇಳಿದ್ದಳು ಎನ್ನಲಾಗಿದ್ದು. ಇದನ್ನು ನಂಬಿದ್ದ ದುಂಡೇಶ್ ಕೂದಲು ಕಟ್ ಮಾಡಿದ್ದ, ನೊಂದ ಸಂತ್ರಸ್ತ ಮಹಿಳೆ ಸದ್ಯ ದೂರು ದಾಖಲಿಸಿದ್ದಾರೆ.
