ಬೆಂಗಳೂರು, ಡಿಸೆಂಬರ್ 2, 2025 : ಸ್ಯಾಂಡಲ್ವುಡ್ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು , ಬಹು ನಿರೀಕ್ಷಿತ ದಿ ಡೆವಿಲ್ ಸಿನಿಮಾದ ಟ್ರೈಲರ್ ಇದೇ ಡಿಸೆಂಬರ್ 5 ಕ್ಕೆ ಬಿಡುಗಡೆಯಾಗಲಿದೆ. ಡಿಸೆಂಬರ್ 12ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸುತ್ತಿರೋ ಡೆವಿಲ್ ಟ್ರೇಲರ್ ಡಿಸೆಂಬರ್ 5ರಂದು ಬೆಳಗ್ಗೆ 10.05ಕ್ಕೆ ಸರಿಗಮ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಲಿದೆ.
ಪರಪ್ಪನ ಜೈಲಲ್ಲಿರೋ ದರ್ಶನ್ ಕಾನೂನು ಹೋರಾಟದ ನಡುವೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ದರ್ಶನ್ ಸೆಲಿಬ್ರೆಟೀಸ್ ಗಳು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಸಜ್ಜಾಗಿದ್ದಾರೆ. ಇದೀಗ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ರಿವೀಲ್ ಆಗಿದ್ದು, ಈ ವಿಷಯ ತಿಳಿದು ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ.
ಅನೌನ್ಸ್ಮೆಂಟನ್ನು ವಿಭಿನ್ನವಾಗಿ ಮಾಡಿರುವ ಚಿತ್ರತಂಡ, ದರ್ಶನ್ ಅವರ ಧ್ವನಿಯಲ್ಲಿ ʼನಾನ್ ಬರ್ತಿದ್ದೀನಿ ಚಿನ್ನʼ ಅಂತ ಟ್ರೈಲರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಿರೋದು ದರ್ಶನ್ ಫ್ಯಾನ್ಸ್ಗೆ ಮತ್ತಷ್ಟು ಖುಷಿಕೊಟ್ಟಿದೆ.ಈಗಾಗಲೇ ಡೆವಿಲ್ ಸಿನಿಮಾದ ಮೂರು ಹಾಡುಗಳು ರಿಲೀಸ್ ಆಗಿದ್ದು, ಎಲ್ಲವೂ ಸೂಪರ್ ಹಿಟ್ ಆಗಿವೆ.ಟ್ರೈಲರ್ಗಾಗಿ ದರ್ಶನ್ ಫ್ಯಾನ್ಸ್ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಕೊನೆಗೂ ಇದೆ ವಾರ ಟ್ರೇಲರ್ ಬಿಡುಗಡೆ ಆಗಲಿದೆ.
ಡೆವಿಲ್ ಚಿತ್ರದಲ್ಲಿ ದರ್ಶನ್ ಲುಕ್ ಹೇಗಿದೆ ಎಂಬ ಝಲಕ್ ಈಗಾಗಲೇ ಅಭಿಮಾನಿಗಳಿಗೆ ಸಿಕ್ಕಿದ್ದು, ರಿಲೀಸ್ ಆಗಿದ್ದ ಟೀಸರ್ ಗಮನ ಸೆಳೆದಿತ್ತು. ಇದೀಗ ಟ್ರೇಲರ್ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದ್ದು ಸಿನಿಮಾದ ಕಥೆ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮನೆಮಾಡಿದೆ. ಡೆವಿಲ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಮಿಲನ ಖ್ಯಾತಿಯ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ರಚನಾ ರೈ , ಅಚ್ಚುತ್ ಸೇರಿದಂತೆ ಸ್ಟಾರ್ ನಟರ ದಂಡೇ ಸಿನಿಮಾದಲ್ಲಿದೆ.
