ಮೈಸೂರು, ಡಿಸೆಂಬರ್ 1, 2025 : ಮಾಜಿ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಯ ಮಾಜಿ ಅಧ್ಯಕ್ಷ ಆರ್ ವಿ ದೇವರಾಜು (67) ಮೈಸೂರಿನಲ್ಲಿ ನಿನ್ನೆ ನಿಧನರಾಗಿದ್ದಾರೆ.
ಕೆಲಸದ ನಿಮಿತ್ತ ಮೈಸೂರಿಗೆ ಬಂದಿದ್ದ ಮಾಜಿ ಎಂ.ಎಲ್.ಎ., ದೇವರಾಜು ಅವರು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಊಟಕ್ಕೆ ತೆರಳುವ ವೇಳೆ ಹೃದಯಾಘಾತವಾಗಿದ್ದು, ತಕ್ಷಣ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತೀವ್ರ ಹೃದಯಾಘಾತವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಜಯದೇವ ಆಸ್ಪತ್ರೆಯಲ್ಲಿ ದೇವರಾಜು ಕೊನೆಯುಸಿರೆಳೆದಿದ್ದಾರೆ.
