PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: “ಹಿಟ್ ಮ್ಯಾನ್” – “ಕಿಂಗ್ ” ಆಟಕ್ಕೆ ಫ್ಯಾನ್ಸ್ ಫಿದಾ.. “ನಿವೃತ್ತಿ” ಮಾತಾಡ್ತಿದ್ದವರಿಗೆ ಗಪ್ ಚುಪ್ ಎಂದ ಸ್ಟಾರ್ ಬ್ಯಾಟರ್ಸ್..
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕ್ರೀಡೆ > “ಹಿಟ್ ಮ್ಯಾನ್” – “ಕಿಂಗ್ ” ಆಟಕ್ಕೆ ಫ್ಯಾನ್ಸ್ ಫಿದಾ.. “ನಿವೃತ್ತಿ” ಮಾತಾಡ್ತಿದ್ದವರಿಗೆ ಗಪ್ ಚುಪ್ ಎಂದ ಸ್ಟಾರ್ ಬ್ಯಾಟರ್ಸ್..
ಕ್ರೀಡೆಮುಖಪುಟ

“ಹಿಟ್ ಮ್ಯಾನ್” – “ಕಿಂಗ್ ” ಆಟಕ್ಕೆ ಫ್ಯಾನ್ಸ್ ಫಿದಾ.. “ನಿವೃತ್ತಿ” ಮಾತಾಡ್ತಿದ್ದವರಿಗೆ ಗಪ್ ಚುಪ್ ಎಂದ ಸ್ಟಾರ್ ಬ್ಯಾಟರ್ಸ್..

Prathinidhi News
Last updated: December 1, 2025 2:45 pm
Prathinidhi News
Published December 1, 2025
Share
SHARE

ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ.. ಮತ್ತೊಬ್ಬ ಜೀನಿಯಸ್ ಹಿಟ್ ಮ್ಯಾನ್ ರೋಹಿತ್ ಶರ್ಮಾ.. ಬಹುಶಹ ಇಬ್ಬರಿಗೂ ವಯಸ್ಸೇ ಆಗಲ್ಲ ಅನ್ಸತ್ತೆ.. ಇನ್ನೇನು ಈ ಇಬ್ಬರು ದಿಗ್ಗಜ ಬ್ಯಾಟರ್ಸ್ ಕಥೆ ಮುಗಿಯಿತು ಅನ್ನೋ ಲೆಕ್ಕಾಚಾರಗಳು ಶುರುವಾಗಿದ್ದ ಬೆನ್ನಲ್ಲೇ ROKO ಜೋಡಿ ಬ್ಯಾಟ್ ಮೂಲಕ ಮತ್ತೆ ಸದ್ದು ಮಾಡಿದೆ. ರೋ-ಕೊ ಜೋಡಿ ಮತ್ತೊಮ್ಮೆ ಕ್ರಿಕೆಟ್‌ ಅಂಗಳದಲ್ಲಿ ಕಮಾಲ್‌ ಮಾಡಿದೆ. 

ಈಗಾಗಲೇ ಟೆಸ್ಟ್‌ ಹಾಗೂ ಟಿ೨೦ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋ-ಕೊ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರವೇ ಆಡುವ ನಿರ್ಧಾರ ಮಾಡಿದ್ದಾರೆ.ಇಬ್ಬರ ಕಮಿಟ್ಮೆಂಟ್ ಹಾಗೂ ಫಾರಂ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದೀಗ ಎಲ್ಲಾ ಟೀಕೆಗಳಿಗೂ ಬ್ಯಾಟ್ ಮೂಲಕವೇ ಸ್ಟಾರ್ ಬ್ಯಾಟರ್ಸ್ ಉತ್ತರ ನೀಡಿದ್ದಾರೆ.

ಇಬ್ಬರು ದಿಗ್ಗಜ ಆಟಗಾರರ ಸೊಗಾಸಾದ ಆಟ ನೋಡಲು ಹಂಬಲಿಸುತ್ತಿದ್ದ ಫ್ಯಾನ್ಸ್‌ಗಳಿಗೆ ರೋ-ಕೊ ಜೋಡಿ ರಸದೌತಣವನ್ನೇ ನೀಡಿದೆ.  ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿಯ ತವರು ರಾಂಚಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಬ್ಬರು ಆಟಗಾರರ ಬೊಂಬಾಟ್‌ ಪ್ರದರ್ಶನ ಫ್ಯಾನ್ಸ್‌ಗಳನ್ನು ರಂಜಿಸಿದೆ.

ಹರಿಣಗಳ ಎದುರು ಅದ್ಭುತ ಆಟವಾಡಿದ ಕಿಂಗ್‌ ಕೊಹ್ಲಿ ಅಮೋಘ ಶತಕ ಬಾರಿಸಿ ಮಿಂಚಿಸಿದರೆ. ಹಿಟ್‌ ಮ್ಯಾನ್‌ ರೋಹಿತ್‌ ಶರ್ಮ ಕೂಡ ಅತ್ಯಾಕರ್ಷಕ ಅರ್ಧಶತಕ ಸಿಡಿಸಿ ಕಕ್ಕಿರಿದು ತುಂಬಿದ್ದ ಅಭಿಮಾನಿಗಳನ್ನ ರಂಜಿಸಿದ್ದಾರೆ.

- ಜಾಹೀರಾತು -

ಬ್ಯಾಟಿಂಗ್‌ ಅಷ್ಟೇ ಅಲ್ಲದೇ ಫೀಲ್ಡಿಂಗ್‌ ವೇಳೆ ಮೈದಾನದಲ್ಲಿ ಅತ್ಯಂತ ಲವಲವಿಕೆಯಿಂದ ಕಾಣಿಸಿಕೊಂಡ ಇಬ್ಬರು ಆಟಗಾರರು, ಪಂದ್ಯದುದ್ದಕ್ಕೂ ನಾಯಕ ಕೆ.ಎಲ್‌.ರಾಹುಲ್‌ ಬೆನ್ನಿಗೆ ನಿಲ್ಲುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಇಬ್ಬರು ಆಟಗಾರರು ನಿವೃತ್ತಿಯ ಅಂಚಿನಲ್ಲಿದ್ದರೂ ತಮ್ಮ ಮನಮೋಹಕ ಆಟದ ಮೂಲಕ ತಮ್ಮ ಕ್ರಿಕೆಟ್‌ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದು, ಫ್ಯಾನ್ಸ್‌ಗಳ ದಿಲ್‌ ಖುಷ್‌ ಆಗುವಂತೆ ಮಾಡಿದೆ. ಅಯ್ಯೋ ಇವರಿಬ್ಬರ ಕಥೆ ಮುಗಿತು ಇನ್ನೇನಿದ್ದರೂ ನಿವೃತ್ತಿಯೊಂದೇ ಗಟ್ಟಿ ಎಂದು ಗೊಣಗುತ್ತಿದ್ದ ಟೀಕಾಕಾರರಿಗೆ ROKO ಜೋಡಿ ಖಡಕ್ ಉತ್ತರ ನೀಡಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ನಂಜನಗೂಡುಮುಖಪುಟ

ನಂಜನಗೂಡು: ಕಸಾಯಿಖಾನೆಗೆ ಸಾಗಿಸುತ್ತಿದ್ದ 38 ಜಾನುವಾರುಗಳ ರಕ್ಷಣೆ – ಚಾಲಕನ ಬಂಧನ

February 10, 2026
ಮುಖಪುಟ

ದಾವಣಗೆರೆ : ಜಮೀನು ಒತ್ತುವರಿಗೆ ನಡೆದ ಗಲಾಟೆ ತಮ್ಮನ ಕೊಲೆಯಲ್ಲಿ ಅಂತ್ಯ

February 3, 2026
ನವದೆಹಲಿಬೆಂಗಳೂರುಮುಖಪುಟ

T20 World Cup 2026: ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೂಪರ್ 8ಕ್ಕೆ ಭಾರತ ಲಗ್ಗೆ

February 16, 2026
ಮುಖಪುಟಮೈಸೂರು ನಗರರಾಜಕೀಯ

ಡೂಪ್ಲಿನ್ ಕಾಂಪ್ಲೆಕ್ಸ್ ತೆರವಿಗೆ ಹೈಕೋರ್ಟ್ ಹಸಿರು ನಿಶಾನೆ: ಎಂಡಿಎ ಆಯುಕ್ತ ರಕ್ಷಿತ್

February 18, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?