ಬೆಂಗಳೂರು, ನವೆಂಬರ್ 25, 2025 : ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ತಾರಕಕ್ಕೇರಿದ್ದು, ಸಿದ್ದು – ಡಿಕೆಶಿ ಪವರ್ ಶೇರಿಂಗ್ ಪಾಲಿಟಿಕ್ಸ್ ದಿಲ್ಲಿ ಅಂಗಳದಲ್ಲಿ ಇತ್ಯರ್ಥ ಆಗಲಿದೆ.

ಕಳೆದ 3 ದಿನಗಳಿಂದ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವತ್ತು ದಿಲ್ಲಿಗೆ ಪ್ರಯಾಣ ಬೆಳಸಲಿದ್ದು, ವರಿಷ್ಠ ರಾಹುಲ್ ಗಾಂಧಿಗೆ ಸದ್ಯದ ರಾಜಕೀಯ ಬೆಳವಣಿಗೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕರಿಂದ ಖರ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು, ಅಧಿಕಾರ ಹಂಚಿಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ವಿವಿಧ ಸಚಿವರು ಹಾಗೂ ಶಾಸಕರ ಜತೆ ಸಮಾಲೋಚನೆ ನಡೆಸಿದ್ದು, ಇದರ ವರದಿಯನ್ನು ರಾಹುಲ್ ಗಾಂಧಿಗೆ ನೀಡಲಿದ್ದಾರೆ. ಇದಾದ ಬಳಿಕ ಪವರ್ ಶೇರಿಂಗ್ ಬಗ್ಗೆ ರಾಗಾ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಇವತ್ತು ಬೆಳಗ್ಗೆ 11 ಗಂಟೆಗೆ ಖರ್ಗೆ ದಿಲ್ಲಿಗೆ ತೆರಳಲಿದ್ದು, ರಾಹುಲ್ ಗಾಂಧಿ ಅವರನ್ನು ಇವತ್ತು ಸಂಜೆ ಅಥವಾ ನಾಳೆ ಬುಧವಾರ ಭೇಟಿಯಾಗಲಿದ್ದಾರೆ. ಈ ವೇಳೆ ಕರ್ನಾಟಕದ ರಾಜಕೀಯದ ವಾಸ್ತವ ಸ್ಥಿತಿಯನ್ನು ರಾಹುಲ್ ಮುಂದೆ ಪ್ರಸ್ತುತ ಪಡಿಸಲಿದ್ದು, ಒಂದೆರೆಡು ದಿನಗಳಲ್ಲಿ ನಾಯಕತ್ವ ಹಂಚಿಕೆ ವಿಚಾರದಲ್ಲಿ ಎದ್ದಿರೋ ಎಲ್ಲಾ ಗೊಂದಲಗಳು ಬಗೆಹರಿಯುವ ನಿರೀಕ್ಷೆ ಇದೆ.
