ಮಂಡ್ಯ, ನವೆಂಬರ್ 20, 2025 : ಮಂಡ್ಯದಲ್ಲಿ ಹೆದ್ದಾರಿಯಲ್ಲಿನ ಜನರನ್ನೇ ಟಾರ್ಗೆಟ್ ಮಾಡಿ ರಾಬರಿ ಮಾಡ್ತಿದ್ದ ಗ್ಯಾಂಗ್ ಲಾಕ್ ಆಗಿದೆ. ಜನರಿಗೆ ಡ್ರಾಪ್ ಕೊಡುವ ನೆಪದಲ್ಲಿ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಬೆಂಗಳೂರಿನ ಮೂವರು ಸ್ಟೂಡೆಂಟ್ಸ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದು, ಬಂಧಿತರನ್ನ ಕಿರಣ್, ಕುಶಾಲ್ ಬಾಬು, ಗೋಕುಲ್ ಎಂದು ಗುರುತಿಸಲಾಗಿದೆ. ಮೂವರು ವಿದ್ಯಾರ್ಥಿಗಳು ಹಣ ಮಾಡುವ ಉದ್ದೇಶದಿಂದ ರಾಬರಿಗೆ ಇಳಿದಿದ್ದರು. ಬ್ಯಸಿನೆಸ್ ನೆಪದಲ್ಲಿ ಒಂದಾಗಿದ್ದ ಮೂವರು ದರೋಡೆ ಮಾಡಲು ಹೊರ ರಾಜ್ಯದ ಕಾರು ಬಾಡಿಗೆಗೆ ಪಡೆದಿದ್ದರು.ಐಷಾರಾಮಿ ಜೀವನ ಶೈಲಿಗೆ ಮಾರುಹೋಗಿದ್ದ ಯುವಕರು ದರೋಡೆ ಮಾಡ್ತಿದ್ದರು ಎನ್ನಲಾಗಿದೆ.
ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುವವರ ಬಳಿ ಹೋಗಿ ಡ್ರಾಪ್ ಕೊಡುವ ನೆಪದಲ್ಲಿ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನು ಹೆದರಿಸಿ ಅವರ ಬಳಿ ಇರುವ ಚಿನ್ನ, ಹಣ ಎಗರಿಸಿ ಪರಾರಿಯಾಗುತ್ತಿದ್ದರು. ಇದೆ ರೀತಿಯಲ್ಲಿ ಅನೇಕ ಪ್ರಕರಣಗಳಲ್ಲಿ ಇವರು ಭಾಜಿಯಾಗಿದ್ದರು. ಸದ್ಯ ಮೂವರು ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
