ಮೈಸೂರು, ನವೆಂಬರ್ 20, 2025 : ಮೈಸೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ದಿನ ಬೆಳಗಾದರೆ ಭಯದಲ್ಲೇ ಬದುಕುವಂತಾಗಿದೆ. ಗಡಿ ಭಾಗದಲ್ಲಿ ಹುಲಿ ದಾಳಿಗೆ ಕಂಗಾಲಾಗಿರೋ ಜನರಿಗೆ ಇದೀಗ ಚಿರತೆ ಭಯ ಆವರಿಸಿದೆ.
ಚಿರತೆ ದಾಳಿಗೆ ಗಬ್ಬದ ಮೇಕೆ ಬಲಿಯಾಗಿದೆ. ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರ ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊಟ್ಟೆಯಲ್ಲಿ ಇದ್ದ ಎರಡು ಮರಿಗಳು ಸಾವನ್ನಪ್ಪಿದೆ
ನಾಗಣ್ಣ ಎಂಬುವರಿಗೆ ಸೇರಿದ ಮೇಕೆ ಚಿರತೆ ದಾಳಿಗೆ ಬಲಿಯಾಗಿದೆ. ವಾರದ ಅಂತರದಲ್ಲಿ ಮೂರು ಮೇಕೆ, ಎರಡು ನಾಯಿಗಳನ್ನು ಚಿರತೆ ಬೇಟೆಯಾಡಿತ್ತು. ಹೊಸಕೋಟೆ, ಆನಂದೂರು ಕೊಪ್ಪಲು ಗ್ರಾಮದ ಸುತ್ತಮುತ್ತ ಆಗಿಂದ್ದಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿದೆ.
ಚಿರತೆ ಓಡಾಟಕ್ಕೆ ಜನರು ಗಾಬರಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಚಿರತೆ ಸೆರೆಗೆ ಬೋನು ಇಟ್ಟಿರುವ ಆರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಗಸ್ತು ಹೆಚ್ಚಿಸಿ ಕಾರ್ಯಾಚರಣೆ ನಡೆಸಿದ್ದಾರೆ.ಹೆಚ್ ಡಿ ಕೋಟೆ, ಸರಗೂರು ತಾಲೂಕುಗಳ ಭಾಗದಲ್ಲಿ ಹುಲಿಗಳ ಕಾಟ ಮಿತಿಮೀರಿದೆ. ಈ ಮಧ್ಯೆ ಮೈಸೂರು ತಾಲ್ಲೂಕಿನಲ್ಲಿ ಚಿರತೆಗಳ ಕಾಟ ವಿಪರೀತವಾಗಿ ಜನರು ಜೀವನ ಮಾಡೋಕೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
