ಬೆಂಗಳೂರು, ನವೆಂಬರ್ 7, 2025 : ತೆಲುಗು ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಮುಂದಿನ ವರ್ಷ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಸ್ಟಾರ್ ಜೋಡಿ ವಿವಾಹ ನಡೆಯಲಿದೆ.
ಫ್ಯಾಮಿಲಿ ಸದಸ್ಯರು ಹಾಗೂ ಕೇವಲ ಆಪ್ತರು ಮದ್ವೆಯಲ್ಲಿ ಭಾಗಿಯಾಗ್ತಿದ್ದು, ಪ್ರೈವಸಿ ಕಾಪಾಡಲು ಸೆಲೆಬ್ರಿಟಿಗಳು ಉದಯಪುರ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆ ಬಗ್ಗೆ ಹಲವು ದಿನಗಳಿಂದ ಊಹಾಪೋಹಗಳು ಹರಿದಾಡುತ್ತಿವೆ.

‘ಥಾಮಾ’ ಚಿತ್ರದ ಭರ್ಜರಿ ಸಕ್ಸಸ್ ಕಂಡಿದ್ದು, ರಶ್ಮಿಕಾ ತಮ್ಮ ಇತರೆ ಸಿನಿಮಾ ಕೆಲಸಗಳನ್ನು ಮುಗಿಸಿ ಮದುವೆಗೆ ಸಿದ್ಧರಾಗುವ ಸಾಧ್ಯತೆ ಇದೆ.ಬಾಲಿವುಡ್ ಬ್ಯುಟಿ ಗಳಾದ ಕತ್ರಿನಾ, ಕಿಯಾರಾ ಅಡ್ವಾಣಿ, ಪರಿಣಿತಿ ಚೋಪ್ರಾ ರಾಜಸ್ಥಾನದಲ್ಲೇ ವಿವಾಹ ಆಗಿದ್ದರು. ಹಳೆಯ ಕಾಲದ ರಾಜರ ಕೋಟೆಗಳನ್ನು ಹೋಟೆಲ್ ಆಗಿ ಬದಲಾಯಿಸಲಾಗಿದ್ದು, ವಿವಾಹಕ್ಕೆ ವಿಶೇಷ ಮೆರಗು ನೀಡುತ್ತವೆ. ಹೀಗಾಗಿ ರಶ್ಮಿಕಾ ಹಾಗೂ ವಿಜಯ್ ಕೂಡ ಇದೇ ಸ್ಥಳವನ್ನು ಆಯ್ಕೆ ಮಾಡಿದ್ದಾರೆ.
ಈಗಾಗಲೇ ಮದುವೆ ಸಿದ್ಧತೆ ನಡೀತಿದೆ ಎಂದು ಆಪ್ತ ಮೂಲಗಳು ಹೇಳುತ್ತಿವೆ. ಆದರೆ ಅಧಿಕೃತವಾಗಿ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಮಾತನಾಡಬೇಕಿದೆ. ಈ ಹಿಂದೆ ಕನ್ನಡ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ಅದು ಮುರಿದುಬಿದ್ದಿತ್ತು.
ಗೀತಾಗೋವಿಂದಂ ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಬಳಿಕ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಜೋಡಿ ಜೊತೆಯಾಗಿತ್ತು.ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇದೆ ವರ್ಷ ಅಕ್ಟೋಬರ್ 3ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದನನ್ನು ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದವು.
