ಮೈಸೂರು , ನವೆಂಬರ್ 6, 2025 : ಮೈಸೂರು ತಾಲ್ಲೂಕು ಇಲವಾಲ ಹೋಬಳಿಯ ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಬೇಕರಿ ಬೀಗ ಮುರಿದು ಹಣ ಕಳ್ಳತನ ಮಾಡಿರುವ ಘಟನೆ ತಡ ರಾತ್ರಿ ನಡೆದಿದೆ.
ಮುಖ್ಯರಸ್ತೆಯ ಪಕ್ಕದಲ್ಲಿ ಇರುವ ಪುನೀತ್ ಮಾಲೀಕತ್ವದ S L ಆಯ್ಯಂಗಾರ್ ಬೇಕರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ .ಅಂಗಡಿಗಳ ಬೀಗ ಮುರಿಯಲು ಸಂಚು ಹಾಕಿದ್ದ ಖದೀಮರು , ಪಕ್ಕದ ಬೇಕರಿ ಬೀಗ ಮುರಿದು ಬೇಕರಿಯಲ್ಲಿದ್ದ 20 ಸಾವಿರ ಹಣಕ್ಕೆ ಕನ್ನ ಹಾಕಿದ್ದಾರೆ. ಸಿಸಿ ಕ್ಯಾಮರಾದಲ್ಲಿ 4 ಜನ ಕಳ್ಳರ ಸಂಚಾರದ ವೀಡಿಯೋ ಸೆರೆಯಾಗಿದೆ.
ಇಲವಾಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಹಿಂದೆ ಕೂಡ ಸರಣಿ ಕಳ್ಳತನ ನಡೆದಿತ್ತು, ಹಾಗೂ ಕಳ್ಳರ ಸೆರೆಹಿಡಿಯುವಲ್ಲಿ ಇಲವಾಲ ಪೋಲಿಸ್ ಠಾಣೆ ಸಿಬ್ಬಂದಿಗಳು ವಿಫಲವಾಗಿದ್ದಾರೆ. ಭಯವಿಲ್ಲದೆ ಕಳ್ಳರು ಗ್ರಾಮದಲ್ಲಿ ಓಡಾಡುತ್ತಿದ್ದು, ಸ್ಥಳೀಯರು ಭಯಭೀತ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ.
