ಮೈಸೂರು,(ಅಕ್ಟೋಬರ್ 05): ನಾನು ರಾಜ್ಯದಲ್ಲಿ ಎಂಟು ವರ್ಷ ಕಾಲ ಮುಖ್ಯಮಂತ್ರಿ ಆಗಿದ್ದೆ. ರಾಹುಲ್ ಗಾಂಧಿ ಯಾವಾಗ ಹೇಳುತ್ತಾರೆ ಅವತ್ತೆ ಸಿಎಂ ಸ್ಥಾನ ಬಿಡುತ್ತೇನೆ ಎಂದು ನಾಲ್ಕೈದು ಬಾರಿ ಹೇಳಿದ್ದೆ. ನಾನು ಹೇಳಿದಂತೆ ನಡೆದುಕೊಂಡಿದ್ದೇನೆ ಎಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಸಂಗವನ್ನ ವಿವರಿಸಿದರು. ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ವ್ಯಾಪ್ತಿಯ ದಾಸನೂರು ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ. ನನಗೆ ಅಧಿಕಾರ ಇರಲಿ ಇಲ್ಲದೆ ಇರಲಿ. ನಿಮ್ಮ ಸೇವೆಯನ್ನು ಸದಾ ಮಾಡ್ತೀನಿ. ನಿಮ್ಮನ್ನು ಯಾವುದೇ ಕಾರಣಕ್ಕೂ ಮರೆಯಲ್ಲ. 40 ವರ್ಷಕ್ಕೆ ಹೆಚ್ಚು ಕಾಲ ರಾಜಕೀಯದಲ್ಲಿದ್ದೇನೆ. ಇಷ್ಟೊಂದು ಕಾಲ ಇರಬೇಕಾದರೆ ನಿಮ್ಮ ಆಶೀರ್ವಾದವೇ ಕಾರಣ. ಅದಕ್ಕಾಗಿ 8 ಬಾರಿ ಗೆದ್ದಿದ್ದೇನೆ ಎಂದು ವರುಣಾ ಜನರ ಕುರಿತು ಭಾವನಾತ್ಮಕವಾಗಿ ಮಾತನಾಡಿದರು.
ನಾಲ್ಕು ಅವಧಿಯಲ್ಲಿ 5 ಸಾವಿರ ಕೋಟಿ ರೂ. ಹೆಚ್ಚು ಅಭಿವೃದ್ಧಿ ಕೆಲಸ ವರುಣ ಕ್ಷೇತ್ರಕ್ಕೆ ಮಾಡಿದ್ದೇನೆ. ನನ್ನ ಕೆಲಸದಿಂದ ನನಗೆ ತೃಪ್ತಿಯಿದೆ. ಬಡವರ ಕೆಲಸವನ್ನು ಮಾಡುವ ಪ್ರಯತ್ನ ಮಾಡಿದ್ದೇನೆ. ಈಗ ಡಿಕೆಶಿ ಸಿಎಂ ಆಗಿದ್ದಾರೆ. ನಮ್ಮೆಲ್ಲ ಕಾರ್ಯಕ್ರಮಗಳನ್ನು ಅವರು ಮುಂದುವರೆಸುವ ವಿಶ್ವಾಸವಿದೆ ಎಂದರು.
