PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಅಭಿಮನ್ಯು ಆನೆ ಮಾವುತ ವಸಂತ ಅವರ ಪತ್ನಿ ಅಂಬಿಕಾ (35) ಸಾ*ವು
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕ್ರೈಂ ಸುದ್ದಿಗಳು > ಅಭಿಮನ್ಯು ಆನೆ ಮಾವುತ ವಸಂತ ಅವರ ಪತ್ನಿ ಅಂಬಿಕಾ (35) ಸಾ*ವು
ಕ್ರೈಂ ಸುದ್ದಿಗಳುಮುಖಪುಟಮೈಸೂರು ನಗರ

ಅಭಿಮನ್ಯು ಆನೆ ಮಾವುತ ವಸಂತ ಅವರ ಪತ್ನಿ ಅಂಬಿಕಾ (35) ಸಾ*ವು

Prathinidhi News
Last updated: October 15, 2026 6:39 pm
Prathinidhi News
Published October 15, 2026
Share
SHARE

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ವೇಳೆ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಯ ಮಾವುತ ವಸಂತ ಅವರ ಪತ್ನಿ ಅಂಬಿಕಾ (35) ಅವರು ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಈ ದುರ್ಘಟನೆಯು ದಸರಾ ಗಜಪಡೆ ಹಾಗೂ ಮಾವುತರು-ಕಾವಾಡಿಗರ ಕುಟುಂಬಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ಬಾರಿಯ ಮೈಸೂರು ದಸರೆಯಲ್ಲಿ ನಿಶಾನೆ ಆನೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮುಖ ಆನೆ ಅಭಿಮನ್ಯುವಿನೊಂದಿಗೆ ಮಾವುತ ವಸಂತ ಅವರ ಕುಟುಂಬವು ಕಾಡಿನಿಂದ ನಾಡಿಗೆ ಅಂದರೆ ಮೈಸೂರು ಅರಮನೆಯಂಗಳಕ್ಕೆ ಬಂದು ಬೀಡುಬಿಟ್ಟಿತ್ತು.

ಅರಮನೆ ಆವರಣದಲ್ಲಿದ್ದ ವಸಂತ ಅವರ ಪತ್ನಿ ಅಂಬಿಕಾ ಅವರಿಗೆ ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ತಕ್ಷಣವೇ ಅವರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಇಂದು (ಅಕ್ಟೋಬರ್ 15) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅಂಬಿಕಾ ಕೊನೆಯೆಳೆದಿದ್ದಾರೆ.

ಸಾವು ಸಂಭವಿಸಿದ ಬೆನ್ನಲ್ಲೇ ಮುಂಜಾನೆಯೇ ಮೃತ ಅಂಬಿಕಾ ಅವರ ಪಾರ್ಥಿವ ಶರೀರವನ್ನು ಮತ್ತಿಗೋಡು ಆನೆ ಕ್ಯಾಂಪ್‌ಗೆ ರವಾನಿಸಲಾಗಿದೆ. ದಸರಾ ಗಜಪಡೆಯ ಇತರ ಮಾವುತರು ಹಾಗೂ ಕಾವಾಡಿಗರು ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ತೆರಳಿದ್ದಾರೆ. ಮಾವುತರ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದರೂ, ದಸರಾ ಕರ್ತವ್ಯದ ನಿಟ್ಟಿನಲ್ಲಿ ಅಭಿಮನ್ಯು ಆನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕಾವಾಡಿ ರಾಜು ಅವರು ವಹಿಸಿಕೊಳ್ಳಲಿದ್ದಾರೆ. ವಸಂತ ಅವರ ಪತ್ನಿ ಅಂಬಿಕಾ ಅವರು ಅಭಿಮನ್ಯುಗೂ ತನ್ನ ಮಗನಂತೆ ಪ್ರೀತಿಯನ್ನು ತೋರಿಸಿದರು. ಅಭಿಮನ್ಯು ಕೂಡ ಅವರ ಕುಟುಂಬದಲ್ಲಿ ಒಬ್ಬನಾಗಿದ್ದ.

ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರಬಲ್ಲ ಹೆಮ್ಮೆಯ ಆನೆ ಕ್ಯಾಪ್ಟನ್ ಅಭಿಮನ್ಯು ಮತ್ತು ಅವನ ಮಾವುತ ಜೆ.ಎಸ್. ವಸಂತ ಹಾಗೂ ಅವರ ಕುಟುಂಬದ ನಡುವಿನ ಬಾಂಧವ್ಯವು ಕೇವಲ ಒಬ್ಬ ಯಜಮಾನ ಮತ್ತು ಪ್ರಾಣಿಯ ನಡುವಿನ ಸಂಬಂಧವಲ್ಲ; ಅದು ಪೀಳಿಗೆಯಿಂದ ಪೀಳಿಗೆಗೆ ಬೆಸೆದುಕೊಂಡಿರುವ ರಕ್ತಸಂಬಂಧಕ್ಕೂ ಮಿಗಿಲಾದ ಅಪೂರ್ವ ಒಡನಾಟವಾಗಿದೆ. ಅಭಿಮನ್ಯು ಮತ್ತು ವಸಂತ ಅವರ ಕುಟುಂಬದ ನಡುವಿನ ಗಾಢವಾದ ಬಾಂಧವ್ಯ ಹೊಂದಿದ್ದ, ವಸಂತ ಅವರ ಕುಟುಂಬವು ಮೂರನೇ ಪೀಳಿಗೆಯಿಂದ ಆನೆಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ. 1977ರಲ್ಲಿ ಕೊಡಗಿನ ಕಾಡುಗಳಲ್ಲಿ ಅಭಿಮನ್ಯುವನ್ನು ಸೆರೆಹಿಡಿದ ದಿನದಿಂದಲೂ ವಸಂತ ಅವರ ತಂದೆ ಸಣ್ಣಪ್ಪ ಅವರೇ ಅಭಿಮನ್ಯುವಿನ ಮುಖ್ಯ ಮಾವುತರಾಗಿದ್ದರು. ಹೀಗಾಗಿ, ಅಭಿಮನ್ಯು ಆನೆ ವಸಂತ ಅವರ ಕುಟುಂಬದಲ್ಲಿ ಒಬ್ಬ ಸದಸ್ಯನಂತೆಯೇ ಬೆಳೆದಿದೆ.

- ಜಾಹೀರಾತು -
TAGGED:#mysuruabhimanyuelephant
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಚಾಮರಾಜನಗರಮುಖಪುಟ

ಚಾಮರಾಜನಗರ: ಉಪ ಲೋಕಾಯುಕ್ತರ ಮಿಂಚಿನ ರೌಂಡ್ಸ್ ; ಆಸ್ಪತ್ರೆ, ಹಾಸ್ಟೆಲ್, ನಗರ ಸ್ವಚ್ಛತೆ ಬಗ್ಗೆ ಅಸಮಾಧಾನ

November 29, 2025
ಮುಖಪುಟಮೈಸೂರು ನಗರ

ಮಾನದಂಡಗಳ ಪಾಲನೆಯೇ ಯಶಸ್ಸಿನ ಮೂಲಾಧಾರ : ಡಾ.ದೇಬಬ್ರತ ರಾಯ್

July 22, 2026
ಮುಖಪುಟಮೈಸೂರು ನಗರ

ಮೈಸೂರು : ರಾಮಸ್ವಾಮಿ ಸರ್ಕಲ್ ನಲ್ಲಿ ಯಮಸ್ವರೂಪಿ ಕಮಾನು.. ಗ್ರಹಚಾರ ಕೆಟ್ರೆ ಶಿವನ ಪಾದವೇ ಗತಿ..!

November 24, 2025
ಬೆಂಗಳೂರುಮುಖಪುಟ

ರಾಜ್ಯದಲ್ಲಿ ಬದಲಾಗಲಿದೆ ವಾತಾವರಣ : ಹಗಲಿನಲ್ಲಿ ಹೆಚ್ಚಿನ ತಾಪಮಾನವಿದ್ದರೂ, ರಾತ್ರಿ ಮತ್ತು ಮುಂಜಾನೆಯ ವೇಳೆ ಚಳಿಯ ವಾತಾವರಣ

January 1, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?