ಬೆಂಗಳೂರು, ನವೆಂಬರ್ 27: ಈಗಿನ ಸರ್ಕಾರದ ಅವಧಿ 2028ಕ್ಕೆ ಅಂತ್ಯವಾಗಲಿದ್ದು, ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಆದ್ರೆ, ಈ ಬಾರಿ 2028ರಲ್ಲಿ ಎಲೆಕ್ಷನ್ ನಡೆಯಲ್ಲ. ಬದಲಿಗೆ 2029ರಲ್ಲಿ ನಡೆಯಲಿದೆ ಎಂದು ಶಾಸಕ ಎಸ್ಟಿ ಸೋಮೇಶಖರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಮಾತನಾಡುವ ವೇಳೆ ಬಿಜೆಪಿ ಜೆಡಿಎಸ್ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಯಾವ್ ಸಭೆ ಆಗಿತ್ತು? ಬಿಜೆಪಿ ಜೆಡಿಎಸ್ ನಮಗೆ ಸಂಬಂಧ ಇಲ್ಲ. ನಾನ್ಯಾಕೆ ಸಭೆಗೆ ಹೋಗಲಿ. 2029ಕ್ಕೆ ಚುನಾವಣೆ ಇದೆ . 2028ಕ್ಕೆ ಇವರು ಚುನಾವಣೆ ಮಾಡಲ್ಲ . ಡಿ ಲಿಮಿಟೇಶನ್ ಗೆ ಅಂತ ಇದೆ. ಅದಕ್ಕೆ ಪ್ರಧಾನಮಂತ್ರಿಗಳು ಹೇಳಿದ್ದಾರಲ್ಲ. ಅದಕ್ಕಾಗಿ ಈಗ ಅರ್ಜೆಂಟ್ ಏನಿದೆ? ಎಂದರು.
ಸಿಎಂ ಅವರು ನನಗೆ 25 ವರ್ಷದಿಂದ ಆತ್ಮೀಯರಾಗಿದ್ದು, ರಾಜಕೀಯಕ್ಕೆ ಅವರು ಸಹಕಾರ ಕೊಟ್ಟಿದಾರೆ. ಸಹಕಾರ ಕ್ಷೇತ್ರದಲ್ಲೂ ಅವರು ಸಹಕಾರ ಕೊಟ್ಟಿದಾರೆ. ಅದೇ ವಿಶ್ವಾಸದಿಂದ ಅವರು ಕೂಡ ನಾವು ಕೂಡ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
