PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಮೈಸೂರು ಪ್ರಜಾಸೇವೆ: ನನ್ನ ಕಾರು ಕಳ್ಳತನವಾಗಿದೆ ಎಂದ ವ್ಯಕ್ತಿ: ಎಂ ಜೊತೆ ಜಗಳ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಮೈಸೂರು ಪ್ರಜಾಸೇವೆ: ನನ್ನ ಕಾರು ಕಳ್ಳತನವಾಗಿದೆ ಎಂದ ವ್ಯಕ್ತಿ: ಎಂ ಜೊತೆ ಜಗಳ
ಮುಖಪುಟಮೈಸೂರು ಗ್ರಾಮಾಂತರರಾಜಕೀಯ

ಮೈಸೂರು ಪ್ರಜಾಸೇವೆ: ನನ್ನ ಕಾರು ಕಳ್ಳತನವಾಗಿದೆ ಎಂದ ವ್ಯಕ್ತಿ: ಎಂ ಜೊತೆ ಜಗಳ

Prathinidhi News
Last updated: October 3, 2026 6:59 pm
Prathinidhi News
Published October 3, 2026
Share
SHARE

ಮೈಸೂರು, ಅಕ್ಟೋಬರ್​​ 03: ‘ನನ್ನ ಕಾರು ಕಳ್ಳತನವಾಗಿದೆ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ’ ಎಂದು ಸಿಎಂ ಡಿಕೆ ಶಿವಕುಮಾರ್​ಗೆ ವ್ಯಕ್ತಿ ದೂರು ನೀಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ‘ಕಳ್ಳರ ಜೊತೆ ಪೊಲೀಸರು ಶಾಮೀಲಾಗಿದ್ದಾರೆ’ ಎಂದು ಸಿಎಂ ಎದುರೇ ವ್ಯಕ್ತಿ ಗಂಭೀರ ಆರೋಪ ಕೂಡ ಮಾಡಿದ್ದಾರೆ.

Contents
ಪೊಲೀಸ್​ ವರಿಷ್ಠಾಧಿಕಾರಿಗೆ ಡಿಕೆ ಶಿವಕುಮಾರ್ ಸೂಚನೆ1.50 ಲಕ್ಷಕ್ಕೆ ಬಡ್ಡಿ ಸೇರಿ 50 ಲಕ್ಷ ರೂ ಮೀಟರ್ ಬಡ್ಡಿ ಕೇಳುತ್ತಿದ್ದಾರೆ: ಸಿಎಂ ಮುಂದೆ ರೈತನ ಅಳಲು

ಇಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಪ್ರಜಾಸೇವೆ ಕಾರ್ಯಕ್ರಮವನ್ನು ಸಿಎಂ ಡಿಕೆ ಶಿವಕುಮಾರ್​ ಚಾಲನೆ ನೀಡಿದರು. ಬಳಿಕ ಜನರ ಸಮಸ್ಯೆ ಆಲಿಸಲು ಮುಂದಾದರು. ಈ ವೇಳೆ ಓರ್ವ ವ್ಯಕ್ತಿ ನನ್ನ ಕಾರು ಕಳ್ಳತನವಾಗಿದೆ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ, ಕಳ್ಳರೊಂದಿಗೆ ಅವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್​ ವರಿಷ್ಠಾಧಿಕಾರಿಗೆ ಡಿಕೆ ಶಿವಕುಮಾರ್ ಸೂಚನೆ

ವ್ಯಕ್ತಿ ಸಮಸ್ಯೆ ಆಲಿಸಿದ ಸಿಎಂ ಆ ರೀತಿ ಯಾಕೆ‌ ಆರೋಪ ಮಾಡ್ತಿದ್ದೀಯಾ ಎಂದು ಕೇಳಿದ್ದಾರೆ. ಪೊಲೀಸರು ದೂರು ಸ್ವೀಕಾರ ಮಾಡದಿರುವುದೇ ಅನುಮಾನಕ್ಕೆ ಕಾರಣವಾಗಿದೆ ಎಂದು ವ್ಯಕ್ತಿ ಹೇಳಿದ್ದಾರೆ. ಈ ವೇಳೆ ದೂರು ಸ್ವೀಕರಿಸಿ ಪ್ರಕರಣ ಇತ್ಯರ್ಥ ಮಾಡುವಂತೆ ಪೊಲೀಸ್​ ವರಿಷ್ಠಾಧಿಕಾರಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದರು.

1.50 ಲಕ್ಷಕ್ಕೆ ಬಡ್ಡಿ ಸೇರಿ 50 ಲಕ್ಷ ರೂ ಮೀಟರ್ ಬಡ್ಡಿ ಕೇಳುತ್ತಿದ್ದಾರೆ: ಸಿಎಂ ಮುಂದೆ ರೈತನ ಅಳಲು

‘ಭೂಮಿಯನ್ನು ತನ್ನ ಹೆಸರಿಗೆ ಬರೆದುಕೊಡಲು ಮೀಟರ್ ಬಡ್ಡಿ ಕೇಳುತ್ತಿದ್ದಾರೆ’ ಎಂದು ಡಿಕೆ ಶಿವಕುಮಾರ್​​ ಬಳಿ ಓರ್ವ ರೈತ ಅಳಲು ತೋಡಿಕೊಂಡರು. ‘1.50 ಲಕ್ಷಕ್ಕೆ ಬಡ್ಡಿ ಸೇರಿ 50 ಲಕ್ಷ ರೂ ಮೀಟರ್ ಬಡ್ಡಿ ಕೇಳುತ್ತಿದ್ದಾರೆ. ಅಡಮಾನವಿಟ್ಟ ಭೂಮಿ ವಾಪಸ್​​ ಕೊಡಲು ಸತಾಯಿಸುತ್ತಿದ್ದಾನೆ. ಸದ್ಯ ನಾನು ಅದೇ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದೇನೆ, ಆದರೆ ಭೂಮಿಯನ್ನು ನನ್ನ ಹೆಸರಿಗೆ ವಾಪಸ್​ ಬರೆದುಕೊಡುತ್ತಿಲ್ಲ. ಸಮಸ್ಯೆ ಬಗೆಹರಿಸಿ’ ಎಂದು ಸಿಎಂಗೆ ಮನವಿ ಮಾಡಿದರು.

- ಜಾಹೀರಾತು -
TAGGED:#mysuruDKSHIVAKUMAR
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರ

ಮೈಸೂರು ಕಟ್ಟೋಣ: ನಗರದ ಅಭಿವೃದ್ಧಿಗೆ ‘ಜಿಎಸ್ಎಸ್ ಸಿಎಸ್ಆರ್’ನಿಂದ ವಿನೂತನ ಅಭಿಯಾನ!

December 4, 2025
ಬೆಂಗಳೂರುಮುಖಪುಟ

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಸಂಸ್ಕಾರ

November 15, 2025
ಮುಖಪುಟಮೈಸೂರು ನಗರ

ಓಣಂ ಪ್ರಯುಕ್ತ ಮೈಸೂರು-ಕಣ್ಣೂರು-ಬೆಂಗಳೂರಿಗೆ ವಿಶೇಷ ಎಕ್ಸ್ಪ್ರೆಸ್ಸ್ ರೈಲು‌ !

July 22, 2026
ಮುಖಪುಟರಾಜಕೀಯ

ಕಾಂಗ್ರೆಸ್ ಕುರ್ಚಿ ಜಗಳ ; “ಕೈ” ನಾಯಕರಿಗೆ ಸಖತ್ತಾಗಿಯೇ ಟಾಂಗ್ ನೀಡಿದ ಬಿ ವೈ ವಿಜಯೇಂದ್ರ ..!

November 4, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?