ಬೆಳಗಾವಿ, ಅಕ್ಟೋಬರ್ 27: ಮೈಸೂರು ದಸರಾ ಬಗ್ಗೆ ಪ್ರಮೋದಾದೇವಿ ಅಸಮಾಧಾನ ವಿಚಾರ ಸಮಭಂಧ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪ್ರಮೋದಾದೇವಿ ಹೇಳಿಕೆ ನೋಡಿಲ್ಲ. ಆದರೆ ಮೊದಲಿನಿಂದಲೂ ಏನು ಪದ್ಧತಿ ಇದೆಯೋ ಅದೇ ರೀತಿ ಆಚರಣೆ ಮಾಡಿದ್ದೇವೆ. ಪ್ರಮೋದಾದೇವಿ ಏನು ಹೇಳಿದ್ದಾರೆ ಗಮನಿಸಿ ಚರ್ಚೆ ಮಾಡ್ತೇನೆ. ಇದು ನನ್ನ, ಪ್ರಮೋದಾ ದೇವಿ ವಿಚಾರ ಅಲ್ಲ, ರಾಜ್ಯದ ವಿಚಾರ. ಈ ಬಾರಿ ದಸರಾದಲ್ಲಿ ಪ್ರಶಾಂತ ಆನೆ ಅಂಬಾರಿ ಹೊತ್ತಿದ್ದಾನೆ. ಶಿವಮೊಗ್ಗದಲ್ಲಿ ಏನಾಯಿತು ಅಂತಾ ನೋಡಿದ್ದೀರಿ ಅಲ್ವಾ? ಸಚಿವರು ಬಂದು ತಮಗೆ ವಹಿಸಿದ ಕೆಲಸವನ್ನು ನಿರ್ವಹಿಸಿದ್ದಾರೆ. ಇನ್ನೂ ಕೆಲವರು ಚುನಾವಣೆ ನಿಮಿತ್ತ ಹೋಗಲು ಆಗಿಲ್ಲ. ದಸರಾ ನಾಡಹಬ್ಬ, ನಾಡಿನ ದೇವತೆಗೆ ಗೌರವ ಕೊಡಬೇಕು. ಇದು ಡಿಕೆಶಿ ಕಾರ್ಯಕ್ರಮ ಅಲ್ಲ, ಸರ್ಕಾರದ ಕಾರ್ಯಕ್ರಮ. ನಮ್ಮದು ತಪ್ಪಿದ್ದರೆ ತಿದ್ದುಕೊಳ್ಳುತ್ತೇವೆ. ನನಗೆ ಇತಿಹಾಸ ಗೊತ್ತಿಲ್ಲ ಪರಂಪರೆಯಂತೆ ಮಾಡಿದ್ದೇವೆ ಎಂದವರು ಹೇಳಿದ್ದಾರೆ.
