ಮೈಸೂರು : ಈ ಬಾರಿಯ ಮೈಸೂರು ದಸರಾ ಅದ್ಧೂರಿಯಾಗಿ ನಡೆದಿದ್ದು, 11 ದಿನಗಳ ನವರಾತ್ರಿ ಉತ್ಸವ ನಿನ್ನೆ (ಅ.21) ಅಂತ್ಯವಾಗಿದೆ. ಇನ್ನು ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಎರಡು ಗಂಟೆ ಸಮಯದಲ್ಲಿ ರಾಜ ಗಾಂಭೀರ್ಯದಿಂದ ಬನ್ನಿಮಂಟಪ ತಲುಪಿದ್ದ ಪ್ರಶಾಂತ ಆನೆ ಹೊಸ ಜಂಬೂಸವಾರಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದೆ. ಹಲವು ವೈಶಿಷ್ಟಗಳಿಂದ ಎಲ್ಲವೂ ಅಚ್ಚುಕಟ್ಟಾಗಿ ದಸರಾ ಸಂಪನ್ನಗೊಂಡಿದ್ದು, ಇದೀಗ ಗಜಪಡೆ ನಾಡಿಯಿಂದ ವಾಪಸ್ ಕಾಡಿಗೆ ತೆರಳಿವೆ. ಅರಮನೆಯಿಂದ ಲಾರಿಗಳಲ್ಲಿ ಕಾಡಿಗೆ ಹೊರಟವು.
ಇದಕ್ಕೂ ಮುನ್ನ ಇದಕ್ಕೂ ಮುನ್ನ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಯ್ತು. ಕ್ಯಾಪ್ಟನ್ ಪ್ರಶಾಂತ್, ಅಭಿಮನ್ಯು, ಧನಂಜಯ, ಏಕಲವ್ಯ, ಮಹೇಂದ್ರ, ಗೋಪಿ, ಶ್ರೀರಾಮ, ಶ್ರೀಕಂಠ, ಸುಗ್ರೀವ ಕಾವೇರಿ, ಚೈತ್ರಾ, ರೂಪಾ, ಲಕ್ಷ್ಮೀ ಆನೆಗಳಿಗೆ ಪೂಜೆ ಸಲ್ಲಿಸಿ ಫಲತಾಂಬೂಲ ನೀಡಿ ಆತ್ಮೀಯ ಬೀಳ್ಕೊಡುಗೆ ನೀಡಲಾಯ್ತು.
