ಬೆಂಗಳೂರು, ನವೆಂಬರ್ 20, 2025 : ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಭರ್ತಿ ಎರಡೂವರೇ ವರ್ಷ ಪೂರೈಸಿದೆ. ಇವತ್ತಿಗೆ ಅವಧಿಯ ಅರ್ಧ ಭಾಗ ಮುಗಿದಿದೆ.
2023 ರ ಮೇ 20ರಂದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇಂದಿಗೆ ಎರಡೂವರೆ ವರ್ಷದ ಅವಧಿ ಪೂರ್ಣಗೊಳಿಸಿದೆ. ಸರ್ಕಾರದ ದ್ವಿತೀಯಾರ್ಧ ಆರಂಭ ಶುರುವಾಗಿದೆ.
ಐದು ಗ್ಯಾರಂಟಿಗಳ ಮೂಲಕ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಪಾರ ಖ್ಯಾತಿಗಳಿಸಿದ್ದು, ಸಾಕಷ್ಟು ಸುಧಾರಣೆ ಕ್ರಮಗಳ ಮೂಲಕ
ಜನರ ವಿಶ್ವಾಸ ಗಿಟ್ಟಿಸಿದೆ.ಇದರ ಮಧ್ಯೆ ನಕ್ಸಲ್ ಮುಕ್ತ ಕರ್ನಾಟಕ ರಾಜ್ಯ ಘೋಷಣೆ, ಒಳಮೀಸಲಾತಿ ಜಾರಿ, ರೈತರ ಪರ ದಿಟ್ಟ ನಿರ್ಧಾರಗಳು, ಕಂದಾಯ ಇಲಾಖೆಯಲ್ಲಿ ಸುಧಾರಣೆ ಸೇರಿ ಹಲವು ಜನಪರ ಕಾರ್ಯಕ್ರಮಗಳಿಂದ ಸರ್ಕಾರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗುತ್ತಲೇ ಇದೆ. ಡಿಸಿಎಂ ಡಿಕೆಶಿ ಅಧಿಕಾರ ವಹಿಸಿಕೊಳ್ತಾರೆ ಅನ್ನೋ ಊಹಾಪೋಹಗಳು ಕೇಳಿಬರುತ್ತಿದೆ. ಸಿದ್ದರಾಮಯ್ಯ ಗಟ್ಟಿಯಾಗಿ ಸಿಎಂ ಕುರ್ಚಿ ಮೇಲೆ ಕುಳಿತಿದ್ದು, ನವೆಂಬರ್ ಕ್ರಾಂತಿ ಠುಸ್ ಆಗಿದೆ. ಇನ್ನೇನಿದ್ದರೂ ಫೆಬ್ರವರಿ ಅಂತ್ಯಕ್ಕೆ ಜಿಬಿಎ ಎಲೆಕ್ಷನ್ ನಡೆಯಲಿದ್ದು, ಆ ಬಳಿಕವೇ ಸಿಎಂ ಬದಲಾವಣೆ ಚರ್ಚೆ ಮತ್ತೆ ಗರಿಗೆದರಲಿದೆ ಎನ್ನಲಾಗಿದೆ. ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ, ದಲಿತ ಸಿಎಂ ವಿಚಾರಗಳು ಚರ್ಚೆಯಾಗುತ್ತಲೇ ಇದೆ.
ಸಂಪುಟ ಪುನಾರಚನೆ ನಾಯಕತ್ವ ಬದಲಾವಣೆ ಮಧ್ಯೆ ಕಾಂಗ್ರೆಸ್ ಎರಡೂ ಮೂರು ಗುಂಪಾಗಿ ಮಾರ್ಪಟ್ಟಿದ್ದು, ಹೈ ಕಮಾಂಡ್ ಈ ಸಂದರ್ಭದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ನಿಶ್ಚಯ ಮಾಡಿದ ಹಾಗೆ ಕಾಣುತ್ತಿದೆ. ಹೇಗೋ ಯಶಸ್ವಿಯಾಗಿ ಎರಡೂವರೆ ವರ್ಷ ಪೂರೈಸಲಾಗಿದ್ದು, ಸದ್ಯಕ್ಕೆ ಸಿಎಂ ಕುರ್ಚಿ ಭದ್ರಾವಾದಂತೆ ಕಾಣುತ್ತಿದೆ.
