ಸರಗೂರು, ನವೆಂಬರ್ 6, 2025 : ನಿಧಿ ಆಸೆಗಾಗಿ ದೇವರ ಗುಡಿಯೊಳಗಿದ್ದ ವಿಗ್ರಹವನ್ನು ದುಷ್ಕರ್ಮಿಗಳು ಕಿತ್ತು ಹಾಕಿ ಭಗ್ನಗೊಳಿಸಿರುವ ಅಘಾತಕರ ಘಟನೆ ಸರಗೂರು ತಾಲ್ಲೂಕಿನ ನೆಮ್ಮನಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಈ ಕೃತ್ಯದಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ.

ಸರಗೂರು ತಾಲ್ಲೂಕಿನ ನೆಮ್ಮನಳ್ಳಿ ಗ್ರಾಮದ ದೇವರಗುಡಿಯಲ್ಲಿ ಇಂದು ಮುಂಜಾನೆ ನಿಧಿ (ಸಂಪತ್ತು) ಆಸೆಗಾಗಿ ದುಷ್ಕರ್ಮಿಗಳು ದೇವರ ಗುಡಿಯೊಳಗಿದ್ದ ದೇವರ ವಿಗ್ರಹವನ್ನು ಕಿತ್ತು ಹಾಕಿ ವಿರೂಪಗೊಳಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ದೇವರಗುಡಿಯ ಬಳಿ ಜಮಾಯಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ದೇವರ ಪವಿತ್ರ ಸ್ಥಳದಲ್ಲಿ ಈ ರೀತಿಯ ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ತನಿಖೆಯನ್ನು ಮುಂದುವರೆಸಿದ್ದಾರೆ.
