ಚಿಕ್ಕಬಳ್ಳಾಪುರ, ನವೆಂಬರ್ 5, 2025 : ಅಕ್ರಮ ಸಂಬಂಧಕ್ಕೆ ಯುವಕನೋರ್ವ ಬಲಿಯಾಗಿದ್ದು, 38 ವರ್ಷದ ಮಹಿಳೆಯ ಕಾಟ ತಾಳಲಾರದೆ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ 38 ವರ್ಷ ವಯಸ್ಸಿನ ಮಹಿಳೆ ಅಕ್ರಮ ಸಂಬಂಧಕ್ಕಾಗಿ ಪದೇಪದೆ ಕಾಡಿಸುತ್ತಿದ್ದ ಕಾರಣ 19 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಮೃತ ಯುವಕನನ್ನು ನಿಖಿಲ್ ಕುಮಾರ್ (19) ಎಂದು ಗುರುತಿಸಲಾಗಿದ್ದು, ಈತ ಇದೇ ಗ್ರಾಮದ 38 ವರ್ಷದ ಮಹಿಳೆ ಶಾರದಾ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ಬಗ್ಗೆ ವಿಚಾರ ತಿಳಿದ ನಿಖಿಲ್ ಪೋಷಕರು ಇದಕ್ಕೆ ತೀವ್ರ ವಿರೋಧ ತೋರಿದ್ದರು. ಆದರೆ ಮಹಿಳೆ ಶಾರದಾ ಮಾತ್ರ ಅತನನ್ನು ಬಿಟ್ಟಿರಲಿಲ್ಲ.ಮಹಿಳೆಯ ಕಾಟ ತಾಳಲಾರದೆ ಆತ ಸಾವಿಗೆ ಶರಣಾಗಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ. ಪೋಷಕರ ಕಣ್ತಪ್ಪಿಸಿ ಯುವಕನನ್ನು ಹೊರಗಡೆ ಕರೆದೊಯ್ಯುತಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ.
