ಗುಂಡ್ಲುಪೇಟೆ , ಮಾರ್ಚ್ 8, 2025 : ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮದ್ದೂರು ಹಾಗೂ ಗುಂಡ್ಲುಪೇಟೆ ಬಫರ್ ಜೋನ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಬೋನಿಗೆ ಎರಡು ಚಿರತೆ ಬಿದ್ದಿರುವ ಘಟನೆ ನಡೆದಿದೆ.
ಹೊಂಗಳ್ಳಿ ಮತ್ತು ಅಕ್ಕಲಪುರ ಗ್ರಾಮಗಳಲ್ಲಿ ಚಿರತೆಗಳು ಸೆರೆಯಾಗಿವೆ. ಹೊಂಗಳ್ಳಿ ಗ್ರಾಮದ ನಾಗಪ್ಪ ಎಂಬುವರ ಜಮೀನಿನಲ್ಲಿ ಸುಮಾರು 4 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಅಕ್ಕಲಪುರ ಗ್ರಾಮದ ಸತೀಶ್ ಎಂಬುವರ ಜಮೀನಿನಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಹಲವು ದಿನಗಳಿಂದ ಚಿರತೆಗಳು ಜನ ಜಾನುವಾರುಗಳಿಗೆ ಭೀತಿ ಉಂಟು ಮಾಡಿದ್ದವು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಗ್ರಾಮಗಳಲ್ಲಿ ಬೋನು ಇರಿಸಲಾಗಿತ್ತು. ಇದೀಗ ಬೋನಿಗೆ ಬಿದ್ದು ಚಿರತೆಗಳು ಸೆರೆಯಾಗಿವೆ. ಸೆರೆಯಾದ ಚಿರತೆಗಳನ್ನು ದೂರದ ಬಂಡೀಪುರದ ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಿಟ್ಟಿದ್ದಾರೆ.