ಬೆಂಗಳೂರು , ಡಿಸೆಂಬರ್ 25, 2025 : ಸ್ಯಾಂಡಲ್ವುಡ್ ನಲ್ಲಿ ಬಹು ನಿರೀಕ್ಷಿತ ಮಾರ್ಕ್ ಹಾಗೂ 45 ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.
ಮಾರ್ಕ್ ನಲ್ಲಿ ಕಿಚ್ಚನ ಎಂಟ್ರಿ ಸಾಂಗ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸ್ಕ್ರೀನ್ ಮೇಲೆ ಕಿಚ್ಚನ ಆಗಮನ ಆಗುತ್ತಿದ್ದಂತೇನೆ ಫ್ಯಾನ್ಸ್ ಸ್ಕ್ರೀನ್ ಬಳಿಗೆ ಹೋಗಿ ಶಿಳ್ಳೆ ಚಪ್ಪಾಳೆ ಹೊಡೆದಿದ್ದಾರೆ.
ಇನ್ನು, 45 ಸಿನಿಮಾವನ್ನು ಫ್ಯಾನ್ಸ್ ಮನಸಾರೆ ಕಣ್ತುಂಬಿಕೊಂಡು ಸೈ ಅಂದಿದ್ದಾರೆ.. ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹಾಗೆಯೇ, ಶಿವರಾಜ್ ಕುಮಾರ್ ನಟನೆಗೆ ಎಲ್ಲರೂ ಶಿವಭಕ್ತರಾಗಿದ್ದು, ಅರ್ಜುನ್ ಜನ್ಯ ಮ್ಯಾಜಿಕಲ್ ಮ್ಯೂಸಿಕ್ ಗೆ ಜನರು ಹುಚ್ಚೆದ್ದು ಕುಣಿದಿದ್ದಾರೆ.ಹುಟ್ಟು – ಸಾವಿನ ನಡುವಿನ ಜೀವನದ ಕರ್ಮ ಎಂಬ ಕಥಾಹಂದರ ಸಿನಿಮಾದಲ್ಲಿದ್ದು, ಬಿಜಿಎಂ ಹಾಗೂ ವಿಎಫ್ಎಕ್ಸ್ ಗೆ ಪ್ರೇಕ್ಷಕ ಖುಷ್ ಆಗಿದ್ದಾನೆ.
45 ಹಾಗೂ ಮಾರ್ಕ್ ಸಿನಿಮಾದಿಂದ ಡೆವಿಲ್ ಕಲೆಕ್ಷನ್ ಕಡಿಮೆಯಾಗಿದ್ದು, ಅಲಾಟ್ ಆಗಿದ್ದ ಸ್ಕ್ರೀನ್ಸ್ ಕೂಡ ಇಳಿಮುಖವಾಗಿದೆ.
