ಕೊಲಂಬೊ, ಫೆಬ್ರವರಿ 16, 2026 :ಟಿ -20 ವಿಶ್ವಕಪ್ ಟೂರ್ನಿಯ ಅತ್ಯಂತ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 61 ರನ್‍ಗಳ ಬೃಹತ್ ಅಂತರದಿಂದ ಸೋಲಿಸಿದ ಭಾರತ ತಂಡವು ಅತ್ಯಂತ ನಿರಾಯಾಸವಾಗಿ ಸೂಪರ್ 8ರ ಹಂತಕ್ಕೆ ಪ್ರವೇಶ ಪಡೆದಿದೆ.ಪಾಕಿಸ್ತಾನ ವಿರುದ್ಧದ ಗೆಲುವು ದೇಶಾದ್ಯಂತ ಸಂಭ್ರಮಕ್ಕೆ ಕಾರಣವಾಗಿದ್ದು,ಕ್ರಿಕೆಟ್ ಅಭಿಮಾನಿಗಳು ರಾತ್ರಿಯಿಡಿ ರಸ್ತೆಯಲ್ಲಿ ಕುಣಿದು ಸಂಭ್ರಮಿಸಿದ್ದಾರೆ.
ಭಾನುವಾರ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಸಾಧಿಸಿದ ಭರ್ಜರಿ ಗೆಲುವು ದೇಶಾದ್ಯಂತ ಸಂಭ್ರಮಾಚರಣೆಗೆ ಕಾರಣವಾಗಿದ್ದು, ಅಭಿಮಾನಿಗಳು ಮಧ್ಯರಾತ್ರಿಯವರೆಗೂ ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಪಂದ್ಯ ನಡೆದ ಶ್ರೀಲಂಕಾದ ಕೊಲಂಬೊದಿಂದ ಹಿಡಿದು ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಯುವಜನತೆ ಭಾರತದ ಪರ ಘೋಷಣೆಗಳನ್ನು ಕೂಗುತ್ತಾ, ಜೈಕಾರ ಹಾಕುವ ಮೂಲಕ ಈ ಮಹತ್ವದ ಜಯವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಭಾರತ ಗೆಲುವು ಸಾಧಿಸುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಡಾ. ಹೆಚ್. ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮೂಲಕ ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ.
