ಕುಂಡ್ಯೋಳಂಡ ಹಾಕಿ । ಕೆಪಿಎಸ್ ಶಾಲೆಯ ಜನರಲ್ ಕೆ. ಎಸ್. ತಿಮ್ಮಯ್ಯ ಮೈದಾನದಲ್ಲಿ ಆಯೋಜನೆ
ಸಣ್ಣುವಂಡ ಕಿಶೋರ್ ನಾಚಪ್ಪ ನಾಪೋಕ್ಲು
ಕೆಪಿಎಸ್ ಶಾಲೆಯ ಜನರಲ್ ಕೆ. ಎಸ್. ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಹಾಕಿ ನಮ್ಮೆಯ 2 ನೇ ದಿನ 15 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡವು.
ಮೂರು ಮೈದಾನಗಳಲ್ಲಿ ಏಕಕಾಲದಲ್ಲಿ ನಡೆದ ಪಂದ್ಯಗಳಲ್ಲಿ ಅಲ್ಲಪ್ಪೀರ, ಉದಿಯಂಡ, ಚೋಡುಮಾಡ, ಕಲ್ಲುಮಾಡಂಡ, ಅಚ್ಚಾಂಡೀರ, ಕನ್ನಂಬೀರ, ಕುಕ್ಕೇರ, ಕಾವಡಿಚಂಡ, ಗುಮ್ಮಟ್ಟೀರ, ಕೋದಂಡ, ನುಚ್ಚಿಮಣಿಯಂಡ, ತಿರೋಡೀರ, ಚೌರೀರ (ಹೊದವಾಡ) ಹಾಗೂ ಪುಳ್ಳಂಗಡ ಗೆಲುವಿನ ನಗೆ ಬೀರಿದವು. ಒಂದು ಪಂದ್ಯ ಮುಂದೂಡಲಾಯಿತು.
ಫಲಿತಾಂಶ ; ಅಲ್ಲಪ್ಪೀರ ತಂಡಕ್ಕೆ ಬೊಳಿಯಂಡ ವಿರುದ್ದ ಪೆನಾಲ್ಟಿ ಸ್ಟ್ರೋಕ್ ನಲ್ಲಿ 3-1 ಗೋಲುಗಳ ಗೆಲುವು ದೊರೆಯಿತು. ಬೊಳಿಯಂಡ ಬೋಪಣ್ಣ, ಅಲ್ಲಪ್ಪೀರ ಲೋಕೇಶ್ ಗೋಲುಗಳ ಕಾಣಿಕೆಯಿಂದ ಉಭಯ ತಂಡಗಳು 1-1 ಸಮಬಲ ಸಾಧಿಸಿತು. ನಂತರ ಸ್ಟ್ರೋಕ್ ನಲ್ಲಿ ಅಲ್ಲಪ್ಪೀರ ಗೆದ್ದು ಬೀಗಿತು.
ಉದಿಯಂಡಕ್ಕೆ ನಾಟೋಳಂಡ ವಿರುದ್ದ 2-0 ಗೋಲುಗಳ ಜಯ ದೊರೆಯಿತು. 3 ನೇ ನಿಮಿಷದಲ್ಲಿ ಉದಿಯಂಡ ಪರ ವರುಣ್, ವಿಕ್ರಂ ಗೋಲು ಹೊಡೆದರು.
ಅನ್ನಾಡಿಯಂಡವು ಬೊಳ್ಳೇರ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ಅನ್ನಾಡಿಯಂಡ ನಿಖಿಲ್ ಪೊನ್ನಣ್ಣ 3, ಬೊಳ್ಳೇರ ಗಗನ್ ಮುದ್ದಯ್ಯ, ಸುಹಾನ್ ಸುಬ್ಬಯ್ಯ ಗೋಲು ಬಾರಿಸಿದರು.
ಚೋಡುಮಾಡ ತಂಡಕ್ಕೆ ಅಣ್ಣಾರ್ಕಂಡ ವಿರುದ್ದ 6-0 ಗೋಲುಗಳ ಜಯ ಲಭಿಸಿತು. ನಿಖಿಲ್ ಕಾವೇರಪ್ಪ 3, ಹರ್ಷ 2, ಗಗನ್ ಗಣಪತಿ 1 ಗೋಲು ಬಾರಿಸಿದರು.
ಕಲ್ಲುಮಾಡಂಡಕ್ಕೆ ಪಟ್ರಪಂಡ ವಿರುದ್ದ 2-1 ಗೋಲುಗಳ ಗೆಲುವು ದೊರೆಯಿತು. ಕಲ್ಲುಮಾಡಂಡ ತರುಣ್ ತಮ್ಮಣ್ಣ 2, ಪಟ್ರಪಂಡ ವಿಪಿನ್ ಪೊನ್ನಪ್ಪ 1 ಗೋಲು ಹೊಡೆದರು.
ಅಚ್ಚಾಂಡೀರ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್ ನಲ್ಲಿ ಬೊಳ್ಳಾರ್ಪಂಡ ವಿರುದ್ದ 3-2 ಗೋಲುಗಳ ರೋಚಕ ಗೆಲುವು ಲಭಿಸಿತು. ಉಭಯ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿತು. ಸ್ಟೊçÃಕ್ನಲ್ಲಿ ಅಚ್ಚಾಂಡೀರ ಗೆಲುವು ಪಡೆದುಕೊಂಡಿತು. ಅಚ್ಚಾಂಡೀರ ಮಂದಣ್ಣ, ಅನೂಪ್ ಅಯ್ಯಪ್ಪ, ಮಾಚಯ್ಯ, ಮುತ್ತಣ್ಣ ತಲಾ ಒಂದೊಂದು ಗೋಲು ಹೊಡೆದರು.
ಕನ್ನಂಬೀರವು ಪಂದ್ಯಂಡವನ್ನು 4-1 ಗೋಲುಗಳಿಂದ ಮಣಿಸಿತು. ಕನ್ನಂಬಿರ ರೋಹನ್ ಕುಟ್ಟಪ್ಪ, ಜಗತ್ ಅಪ್ಪಣ್ಣ, ದೇವ್ ಕುಶಾಲಪ್ಪ, ವಿಷನ್ ಬೋಪಣ್ಣ, ಪಂದ್ಯಂಡ ಶಮನ್ ಗೋಲು ಹೊಡೆದರು.
ಕುಕ್ಕೇರ ತಂಡಕ್ಕೆ ಪೂದ್ರಿಮಾಡ ವಿರುದ್ದ 3-1 ಗೋಲುಗಳ ಜಯ ದೊರೆಯಿತು. ಭುವನ್ ಬೆಳ್ಯಪ್ಪ 3, ಸರಿತಾ 1 ಗೋಲು ಬಾರಿಸಿದರು. ಪೂದ್ರಿಮಾಡ ಭುವನ್ ಬೆಳ್ಯಪ್ಪ 3, ಕುಕ್ಕೇರ ಸುಬ್ಬಯ್ಯ 1 ಗೊಲು ಬಾರಿಸಿದರು.
ಕಾವಡಿಚಂಡವು ಪಾರುವಂಗಡ ವಿರುದ್ದ 3-1 ಗೋಲುಗಳ ಜಯ ಪಡೆಯಿತು. ಕಾವಾಡಿಚಂಡ ಕೀರ್ತನ್ 2, ಪ್ರಜ್ವಲ್ ನಂಜಪ್ಪ, ಪಾರುವಂಡ ಧೀರ್ ಸೋಮಣ್ಣ, ಗೋಲು ಹೊಡೆದರು.
ಗುಮ್ಮಟ್ಟೀರ ತಂಡವು ಅಯ್ಯಮಂಡವನ್ನು 3-1 ಗೋಲುಗಳಿಂದ ಸೋಲಿಸಿತು. ಗುಮ್ಮಟ್ಟೀರ ಮೃದು ನಾಣಯ್ಯ 2, ದರ್ಶನ್ ನಂಜಪ್ಪ, ಅಯ್ಯಮಂಡ ಅಚಲ್ 1 ಗೋಲು ಬಾರಿಸಿದರು. ಗುಮ್ಮಟ್ಟೀರ ತಂಡದಲ್ಲಿ ಮಹಿಳೆ ಉಷಾ ದೇಚಮ್ಮ ಗೋಲ್ ಕೀಪರ್ ಆಗಿ ಆಡಿದರು.
ಕೋದಂಡಕ್ಕೆ ಬೊಪ್ಪತಂಡ ವಿರುದ್ದ 4-0 ಗೋಲುಗಳ ಗೆಲುವು ದೊರೆಯಿತು. ಕೋದಂಡ ಕರನ್ ತಿಮ್ಮಯ್ಯ 2, ನಿಖಿಲ್ ತಿಮ್ಮಯ್ಯ, ಅದಿಪ್ ಬೋಪಯ್ಯ ಗೋಲು ಹೊಡೆದರು.
ನುಚ್ಚಿಮಣಿಯಂಡ ತಂಡಕ್ಕೆ ಪುಚ್ಚಿಮಂಡ ವಿರುದ್ದ 4-0 ಗೋಲುಗಳ ಗೆಲುವು ಲಭಿಸಿತು. ನುಚ್ಚಿಮಣಿಯಂಡ ಪೂವಣ್ಣ, ಯಶ್ವಿನ್, ಪೂವಯ್ಯ, ಪೊನ್ನಣ್ಣ ತಲಾ ಒಂದೊAದು ಗೋಲು ಬಾರಿಸಿದರು.
ತಿರೋಡೀರ ತಂಡವು ಬೊಳ್ಳಿಮಾಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ತಿರೋಡೀರ ನಿರುಪ್ ನಾಣಯ್ಯ 3, ಗಣೇಶ್ ಗಣಪತಿ 1 ಗೋಲು ಬಾರಿಸಿದರು.
ಚೌರೀರ (ಹೊದವಾಡ) ತಂಡಕ್ಕೆ ತಾತಪಂಡ ವಿರುದ್ದ 2-0 ಗೋಲುಗಳ ಗೆಲುವು ದಕ್ಕಿತು. ಡಾನ್ ಪೆಮ್ಮಯ್ಯ, ಶರತ್ ಪೂಣಚ್ಚ ಗೋಲು ಹೊಡೆದರು.
ಪುಳ್ಳಂಗಡ ತಂಡವು ಕಟ್ಟೇರವನ್ನು 1-0 ಗೋಲುಗಳಿಂದ ಸೋಲಿಸಿತು ಪುಳ್ಳಂಗಡ ಮುತ್ತಣ್ಣ ಏಕೈಕ ಗೋಲು ಗೆಲುವು ದೊರಕಿಸಿಕೊಟ್ಟಿತು. ಪುಳ್ಳಂಗಡ ತಂಡದಲ್ಲಿ ತಂದೆ ಬೋಪಣ್ಣ, ತಾಯಿ ಸೌಮ್ಯ, ಮಗ ಅಪ್ಪಣ್ಣ ಆಡಿದರು.
ಇಂದಿನ ಪಂದ್ಯಗಳು
ಮೈದಾನ 1
ಬೆ. 9. ; ಆಚೆಯಡ-ಪುಗ್ಗೆರ
10 ; ನಾಳಿಯಂಡ-ಪೂಳಂಡ
11 ; ಬಾದುಮಂಡ-ಚನ್ನಪಂಡ
ಮ.12 ; ಕೊಲ್ಲೀರ-ಮಲ್ಲೇಂಗಡ
1 ; ಕೊಣಿಯಂಡ – ಮಂಡೀರ (ಮಾದಾಪುರ)
2 ; ಕೈಬಿಲೀರ-ಚೇರಂಡ
3 ; ಕೊಳುಮಾಡಂಡ-ಅಕ್ಕಪ್ಪಂಡ
ಮೈದಾನ 2
ಬೆ. 9 ; ಐಚಂಡ-ಮುಕ್ಕಾಟೀರ (ಬೇತ್ರಿ)
10 ; ಮಾಚೇಟೀರ-ಬೊಳಕಾರಂಡ
11 ; ಗಾಂಡಂಗಡ-ಮಚ್ಚುರ
ಮ.1 ; ಪಾಲೇಂಗಡ – ಮೇದುರ
2 ; ತೆನ್ನೀರ – ಮೂಕಚಂಡ
3 ; ಬೊಳ್ಳಚಂಡ-ಮುಕ್ಕಾಟೀರ (ಮೂವತೊಕ್ಲು)
ಮೈದಾನ 3
ಬೆ. 9 ; ತಾಪಂಡ-ಚೋಕೀರ
10 ; ಕೆತ್ತೀರ-ಚೆಯ್ಯಂಡ
11 ; ಕಾಳಿಮಾಡ-ಮಾದೇಯಂಡ
ಮ.1 ; ಪಡಿಯೇಟ್ಟೀರ-ಕನ್ನಿಕಂಡ
2 ; ಅಣ್ಣೀರ-ಬೊಟ್ಟಂಗಡ
3 ; ಕುಯ್ಮಿಂಡ-ಮಾಣೀರ
ಫೋಟೋ 31 ಎಂಡಿಕೆ 10 ; ಕನ್ನಂಬೀರ- ಪಂದ್ಯಂಡ ತಂಡಗಳ ನಡುವಿನ ಪಂದ್ಯ
11 ; ಪುಳ್ಳಂಗಡ ತಂಡದಲ್ಲಿ ತಂದೆ ಬೋಪಣ್ಣ, ತಾಯಿ ಸೌಮ್ಯ, ಮಗ ಅಪ್ಪಣ್ಣ ಆಡಿದರು
12 ; ಗುಮ್ಮಟ್ಟೀರ ತಂಡದಲ್ಲಿ ಮಹಿಳೆ ಉಷಾ ದೇಚಮ್ಮ ಗೋಲ್ ಕೀಪರ್ ಆಗಿ ಆಡಿದರು.