ಮೈಸೂರು, ನವೆಂಬರ್ 4, 2025 : ಕರ್ನಾಟಕ ರಾಜ್ಯ ಸರ್ಕಾರವು 2018ನೇ ಸಾಲಿನ ಪ್ರತಿಷ್ಠಿತ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು, ನಟ ರಾಘವೇಂದ್ರ ರಾಜ್‌ಕುಮಾರ್ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ (ಸುಬ್ಬಯ್ಯ ನಾಯ್ಡು ಪ್ರಶಸ್ತಿ)ಗೆ ಭಾಜನರಾಗಿದ್ದಾರೆ. ಹಾಗೂ ನಟಿ ಮೇಘನಾ ರಾಜ್ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ.
ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರವು ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ (ಎಚ್‌ಎನ್.ಸಿಂಹ ಪ್ರಶಸ್ತಿ) ಲಭಿಸಿದೆ.

ಪ್ರಮುಖ ಪ್ರಶಸ್ತಿ ವಿಜೇತರ ವಿವರ:
| ವಿಭಾಗ | ಪ್ರಶಸ್ತಿ ವಿಜೇತರು | ವಿಶೇಷ ಟಿಪ್ಪಣಿ |
| ಅತ್ಯುತ್ತಮ ನಟ | ರಾಘವೇಂದ್ರ ರಾಜ್‌ಕುಮಾರ್ | ಸುಬ್ಬಯ್ಯ ನಾಯ್ಡು ಪ್ರಶಸ್ತಿ |
| ಅತ್ಯುತ್ತಮ ನಟಿ | ಮೇಘನಾ ರಾಜ್ | |
| ಮೊದಲನೇ ಅತ್ಯುತ್ತಮ ಚಿತ್ರ | ಆ ಕರಾಳ ರಾತ್ರಿ | ನಿರ್ಮಾಪಕರು: ಮೆ: ಡಿ ಪಿಕ್ಚರ್ಸ್ |
| ಎರಡನೇ ಅತ್ಯುತ್ತಮ ಚಿತ್ರ | ರಾಮನ ಸವಾರಿ | |
| ಮೂರನೇ ಅತ್ಯುತ್ತಮ ಚಿತ್ರ | ಒಂದಲ್ಲಾ ಎರಡಲ್ಲಾ | |
| ಅತ್ಯುತ್ತಮ ಪೋಷಕ ನಟ | ಬಾಲಾಜಿ ಮನೋಹರ್ | ಕೆ ಎಸ್ ಅಶ್ವಥ್ ಪ್ರಶಸ್ತಿ |
| ಅತ್ಯುತ್ತಮ ಪೋಷಕ ನಟಿ | ವೀಣಾ ಸುಂದರ್ | |
| ಅತ್ಯುತ್ತಮ ನಿರ್ದೇಶಕ | ದಯಾಳ್ ಪದ್ಮನಾಭನ್ | ಎಚ್‌ಎನ್.ಸಿಂಹ ಪ್ರಶಸ್ತಿ (‘ಆ ಕರಾಳ ರಾತ್ರಿ’) |
| ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ | ಸ.ಹಿ.ಪ್ರಾ.ಶಾಲೆ ಕಾಸರಗೋಡು | ನಿರ್ದೇಶಕ: ರಿಷಬ್ ಶೆಟ್ಟಿ |
ಇತರ ಪ್ರಮುಖ ಪ್ರಶಸ್ತಿ ವಿಜೇತರು:
- ಅತ್ಯುತ್ತಮ ಕಥೆ: ಹರೀಶ್ ಎಸ್.
- ಅತ್ಯುತ್ತಮ ಚಿತ್ರ ಕಥೆ: ಪಿ ಶೇಷಾದ್ರಿ.
- ಅತ್ಯುತ್ತಮ ಸಂಭಾಷಣೆ: ಶರೀಫ್ ಜೋಷಿ
- ಅತ್ಯುತ್ತಮ ಛಾಯಾಗ್ರಹಣ: ನವೀನ್ ಕುಮಾರ್ ಐ
- ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರ್
- ಅತ್ಯುತ್ತಮ ಸಂಕಲನ: ಸುರೇಶ್ ಆರ್ಮುಗಂ
- ಅತ್ಯುತ್ತಮ ಗೀತರಚನೆ: ಡಾ. ಬರಗೂರುರಾಮಚಂದ್ರಪ್ಪ
- ಅತ್ಯುತ್ತಮ ಹಿನ್ನಲೆ ಗಾಯಕ: ಸಿದ್ಧಾರ್ಥ ಬೆಳ್ಮಣ್ಣು
- ಅತ್ಯುತ್ತಮ ಹಿನ್ನೆಲೆಗಾಯಕಿ: ಕಲಾವತಿ ದಯಾನಂದ
ವಿಶೇಷ ವಿಭಾಗಗಳು:
- ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ (ನಿರ್ದೇಶಕ: ಟಿ.ಎಸ್ ನಾಗೇಶ್)
- ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ (ನಿರ್ದೇಶಕ: ಬಿ.ಮಂಜುನಾಥ್)
- ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬೆಳಕಿನ ಕನ್ನಡಿ (ನಿರ್ದೇಶಕ: ಬಸವರಾಜ್ ವಿ.ಹಮ್ಮಿಣಿ)
- ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ದೇಯಿ ಬೈದೇತಿ (ತುಳು)
