PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ನಂಜನಗೂಡು: ಉರುಳಿಗೆ ಸಿಲುಕಿದ್ದ ವಿದೇಶಿ ಅತಿಥಿ ‘ಪಟ್ಟೆತಲೆ ಬಾತುಕೋಳಿ’ಯನ್ನು ರಕ್ಷಿಸಿದ ಹದಿನಾರು ಗ್ರಾಮದ ಯುವಕರು
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ನಂಜನಗೂಡು: ಉರುಳಿಗೆ ಸಿಲುಕಿದ್ದ ವಿದೇಶಿ ಅತಿಥಿ ‘ಪಟ್ಟೆತಲೆ ಬಾತುಕೋಳಿ’ಯನ್ನು ರಕ್ಷಿಸಿದ ಹದಿನಾರು ಗ್ರಾಮದ ಯುವಕರು
ಮುಖಪುಟಮೈಸೂರು ನಗರ

ನಂಜನಗೂಡು: ಉರುಳಿಗೆ ಸಿಲುಕಿದ್ದ ವಿದೇಶಿ ಅತಿಥಿ ‘ಪಟ್ಟೆತಲೆ ಬಾತುಕೋಳಿ’ಯನ್ನು ರಕ್ಷಿಸಿದ ಹದಿನಾರು ಗ್ರಾಮದ ಯುವಕರು

Prathinidhi News
Last updated: March 4, 2026 1:04 pm
Prathinidhi News
Published March 4, 2026
Share
SHARE

ಮೈಸೂರು, ಮಾರ್ಚ್‌ 4, 2026 : ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಹೊರವಲಯದಲ್ಲಿ ತಂತಿ ಉರುಳಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಪರೂಪದ ‘ಬಾರ್ ಹೆಡೆಡ್ ಗೂಸ್’ (ಪಟ್ಟೆತಲೆ ಬಾತುಕೋಳಿ) ಪಕ್ಷಿಯನ್ನು ಸ್ಥಳೀಯ ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ದೂರದ ಮಂಗೋಲಿಯಾದಿಂದ ಹಿಮಾಲಯ ಪರ್ವತವನ್ನು ದಾಟಿಕೊಂಡು ಸಾವಿರಾರು ಮೈಲಿ ಕ್ರಮಿಸಿ ಭಾರತಕ್ಕೆ ಬರುವ ಈ ಪಕ್ಷಿಗಳು, ಪ್ರತಿ ವರ್ಷ ಚಳಿಗಾಲದ ಅವಧಿಯಲ್ಲಿ ಹದಿನಾರು ಗ್ರಾಮದ ಕೆರೆಗೆ ವಲಸೆ ಬರುತ್ತವೆ. ಎಂದಿನಂತೆ ವಲಸೆ ಬಂದಿದ್ದ ಈ ಹಕ್ಕಿಗಳಲ್ಲಿ ಒಂದು ಹಕ್ಕಿ ಆಕಸ್ಮಿಕವಾಗಿ ಆಹಾರ ಅರಸುವಾಗ ಉರುಳಿಗೆ ಸಿಲುಕಿಕೊಂಡಿತ್ತು. ತಂತಿಯ ಪೆಟ್ಟಿನಿಂದಾಗಿ ಹಾರಲಾಗದೆ ಒದ್ದಾಡುತ್ತಿದ್ದ ಪಕ್ಷಿಯನ್ನು ಗಮನಿಸಿದ ಗ್ರಾಮದ ಯುವಕರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.

ಬಹಳ ಜಾಗರೂಕತೆಯಿಂದ ಹಕ್ಕಿಯ ದೇಹಕ್ಕೆ ಸುತ್ತಿಕೊಂಡಿದ್ದ ತಂತಿಯನ್ನು ಬಿಡಿಸಿದ ಯುವಕರು, ಅದಕ್ಕೆ ಅಗತ್ಯವಾದ ಪ್ರಾಥಮಿಕ ಶುಶ್ರೂಷೆ ನೀಡಿ ಮತ್ತೆ ಕೆರೆಗೆ ಬಿಟ್ಟಿದ್ದಾರೆ. ಸಾವಿನ ದವಡೆಯಿಂದ ಪಾರಾದ ಪಕ್ಷಿಯು ಕೆರೆಯಲ್ಲಿ ಮತ್ತೆ ಸ್ವಚ್ಚಂದವಾಗಿ ಈಜುತ್ತಾ ಸಾಗಿದ್ದು, ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿದೇಶಿ ಹಕ್ಕಿಗಳು ಕೆಲ ತಿಂಗಳುಗಳ ಕಾಲ ಇಲ್ಲಿನ ಕೆರೆಗಳಲ್ಲಿ ವಾಸ್ತವ್ಯ ಹೂಡಿ, ನಂತರ ಮತ್ತೆ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕ್ರೈಂ ಸುದ್ದಿಗಳುಬೆಂಗಳೂರುಮುಖಪುಟ

ಬೆಂಗಳೂರಿನ ಆಸ್ಪತ್ರೆಯಲ್ಲಿ ಕಾಮುಕ ಸಿಬ್ಬಂದಿಯ ವಿಕೃತಿ: ನರ್ಸ್‌ಗಳ ಖಾಸಗಿ ವಿಡಿಯೋ ಚಿತ್ರೀಕರಣ – ಆರೋಪಿ ಬಂಧನ

December 26, 2025
ನವದೆಹಲಿಮುಖಪುಟರಾಜಕೀಯ

ಬಿಜೆಪಿಗೆ ನೂತನ ಅಧ್ಯಕ್ಷ ; ನೂತನ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ !

January 20, 2026
ಮುಖಪುಟಮೈಸೂರು ಗ್ರಾಮಾಂತರ

ಹೆಚ್.ಡಿ.ಕೋಟೆ: ಎನ್. ಬೆಳತ್ತೂರು ನಿವಾಸಿಗಳಿಗೆ ನಿರಾಳ – ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ

February 4, 2026
ಮುಖಪುಟಮೈಸೂರು ನಗರ

ಬೆಟ್ಟದ ನಂದಿಗೆ 20ನೇ ವರ್ಷದ ಮಹಾಭಿಷೇಕ: 32 ಬಗೆಯ ದ್ರವ್ಯಗಳಿಂದ ಪೂಜೆ ಸಲ್ಲಿಕೆ

November 17, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?