ಮೈಸೂರು , ನವೆಂಬರ್ 3, 2025 : ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ ಪ್ರತಿಮೆ ನೈಜವಾಗಿ ಮೂಡಿ ಬಂದಿಲ್ಲ. ಹಾಗೂ ಈ ಬಗ್ಗೆ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಸಿದ್ಧರಾಮಯ್ಯ ಕೂಡ ಅಸಮಾಧಾನ ವ್ಯಕ್ತಪಡಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರತಿಮೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಇರುವ ಪ್ರತಿಮೆಯಂತೆ ಮೈಸೂರು ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆ ಮೂಡಿ ಬಂದಿಲ್ಲ. ಈ ಪ್ರತಿಮೆ ಅರಸುರವರನ್ನು ಹೋಲುತ್ತಿಲ್ಲ ಎಂದು, ನೂತನವಾಗಿ ಲೋಕಾರ್ಪಣೆ ಮಾಡಿದ ಪ್ರತಿಮೆ ಕುರಿತು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ದೇವರಾಜ ಅರಸುರವರ ಪುತ್ರಿ ಭಾರತಿ ಅರಸು ಹಾಗು ಅರಸು ಸಮುದಾಯದ ಪ್ರಮುಖರು ಹಾಗೂ ರಾಜಕೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರತಿನಿಧಿ ನ್ಯೂಸ್ ಗೆ ಹೇಳಿಕೆ ನೀಡಿದರು.
