ಶ್ರೀರಂಗಪಟ್ಟಣ, ನವೆಂಬರ್ 5, 2025 : ವಿಶ್ವವಿಖ್ಯಾತ ಕೃಷ್ಣರಾಜ ಸಾಗರ (KRS) ಜಲಾಶಯ ಹಾಗೂ ಬೃಂದಾವನ ಗಾರ್ಡನ್‌ನಲ್ಲಿ ಮತ್ತೆ ಭದ್ರತಾ ಲೋಪ ಸಾಬೀತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ‘ಡೋಂಟ್ ಕೇರ್’ ನೀತಿಯಿಂದ ಪ್ರಭಾವಿಗಳ ಕಾರುಬಾರು ನಿಲ್ಲುತ್ತಿಲ್ಲ. ಪದೇ ಪದೇ ಭದ್ರತಾ ಲೋಪಗಳಾಗುತ್ತಿದ್ದರೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF), ಕಾವೇರಿ ನೀರಾವರಿ ನಿಗಮ (CNN), ಪೊಲೀಸ್ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನಿರ್ಬಂಧಿತ ಪ್ರದೇಶಗಳಲ್ಲಿ ರಾಜಾರೋಷವಾಗಿ ಪ್ರಭಾವಿಗಳ ವಾಹನಗಳು ನಿಲ್ಲುತ್ತಿವೆ. ವಿಶ್ವವಿಖ್ಯಾತ ಬೃಂದಾವನ ಗಾರ್ಡನ್‌ನ ಫುಟ್‌ಪಾತ್‌ನಲ್ಲಿ ಪ್ರಭಾವಿಗಳು ಯಾವುದೇ ಭಯವಿಲ್ಲದೆ ಸೈಕ್ಲಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪವಿತ್ರ ಕಾವೇರಿ ಆರತಿ ನಡೆಯುವ ಸ್ಥಳದಲ್ಲಿ ಶೂ ಹಾಕಿಕೊಂಡು ಸೈಕ್ಲಿಂಗ್ ಮಾಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.
ಕೆಆರ್‌ಎಸ್‌ನ ಮುಖ್ಯ ದ್ವಾರದ ಮುಂದೆಯೇ ಪ್ರಭಾವಿಗಳು ಮತ್ತು ಅವರ ಬೆಂಬಲಿಗರು ಫೋಟೋಗಳಿಗೆ ಪೋಸ್ ನೀಡುತ್ತಾರೆ. ಈ ಎಲ್ಲಾ ಅಂಧಾ ದರ್ಬಾರ್‌ಗೆ ಕಡಿವಾಣ ಹಾಕಲು ಭದ್ರತಾ ಸಿಬ್ಬಂದಿ ನಿಷ್ಕ್ರಿಯರಾಗಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಸಾಮಾನ್ಯ ಪ್ರವಾಸಿಗರಿಗೆ ಒಂದು ರೀತಿಯ ಕಾನೂನು ಮತ್ತು ನಿಯಮಗಳು, ಆದರೆ ಪ್ರಭಾವಿಗಳಿಗೆ ಮತ್ತೊಂದು ಕಾನೂನು ಇದೆಯೇ? ಎಂಬ ಪ್ರಶ್ನೆ ಇದೀಗ KRS ವಲಯದಲ್ಲಿ ಭುಗಿಲೆದ್ದಿದೆ. ಈ ಗಂಭೀರ ಲೋಪಗಳಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳಿಗೂ ಪನಿಷ್ಮೆಂಟ್ ಆಗುತ್ತಿಲ್ಲ.
ಒಟ್ಟಾರೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಪದೇ ಪದೇ ಭದ್ರತಾ ಲೋಪಗಳಾಗುತ್ತಿದ್ದರೂ, ಪ್ರಭಾವಿಗಳ ಅಂಧಾ ದರ್ಬಾರ್‌ಗೆ ಬ್ರೇಕ್ ಹಾಕುವಲ್ಲಿ ಸ್ಥಳೀಯ ಆಡಳಿತ ಹಾಗೂ ಭದ್ರತಾ ಸಂಸ್ಥೆಗಳು ವಿಫಲವಾಗಿವೆ ಎಂಬುದು ಸ್ಪಷ್ಟವಾಗಿದೆ.
