ಬೆಂಗಳೂರು, ಜನವರಿ 8, 2026: ರಾಕಿಂಗ್ ಸ್ಟಾರ್ ಯಶ್ ಗೆ ಬರ್ತ್ ಡೇ ಫ್ಯಾನ್ಸ್ ಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. 40ನೇ ಹುಟ್ಟುಹಬ್ಬದ ಮಧ್ಯೆ ಯಶ್ ಅಭಿನಯದ ಬಹು ನಿರೀಕ್ಷಿತ Toxic ಸಿನಿಮಾ ಟೀಸರ್ ರಿಲೀಸ್ ಆಗಿದೆ.
ಬಹುನಿರೀಕ್ಷಿತ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ʼನ ಟೀರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಯಶ್ ಅವರ ಪಾತ್ರದ ಹೆಸರು ʻರಾಯ’ ಎಂದು ರಿವೀಲ್ ಆಗಿದ್ದು, ಟೀಸರ್‌ನಲ್ಲಿ ಯಶ್ ಅವರ ʻರಾಯʼ ಪಾತ್ರದ ಮೊದಲ ಝಲಕ್ ಅಭಿಮಾನಿಗಳನ್ನ ರೋಮಾಂಚನಗೊಳಿಸಿದೆ.
ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ʻಪ್ಯೂರ್ ಹಾಲಿವುಡ್ ವೈಬ್ಸ್ʼ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಟೀಸರ್‌ನಲ್ಲಿ ಯಶ್ ಸಿಕ್ಸ್ ಪ್ಯಾಕ್ ದೇಹದೊಂದಿಗೆ ಮಾಸ್ ಮತ್ತು ಸ್ಟೈಲೀಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಪೋಸ್ಟರ್ ನಿಂದ ಸಿಕ್ಕಾಪಟ್ಟೆ ಕುತೂಹಲ ಮನೆ ಮಾಡಿತ್ತು. ನಂತರ ಸಿನಿಮಾದಲ್ಲಿ ನಟನೆ ಮಾಡಿರುವ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ನಟಿಯರ ಪೋಸ್ಟರ್ ಹಾಗೂ ಅವರ ಪಾತ್ರಗಳ ಬಗ್ಗೆ ರಿವೀಲ್ ಮಾಡಿತ್ತು. ಇದೀಗ ಟೀಸರ್ ಬಿಡುಗಡೆ ಮಾಡಿ ಸಿಸಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾ ಎಕ್ಸ್ ಪೆಕ್ಟ್ ಷನ್ ಹೆಚ್ಚಿಸಿದೆ.
