ಬೆಂಗಳೂರು, ಮಾರ್ಚ್ 25, 2026 : ಐಪಿಎಲ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೊದ್ಲ ಮ್ಯಾಚ್ ಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಿದ್ಧವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದು, ಹಾಲಿ ಚಾಂಪಿಯನ್ ಆರ್‌ಸಿಬಿ ಉದ್ಘಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ದ ಹೋರಾಟ ನಡೆಸಲಿದೆ. ಆದರೆ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ.

ಮಂಗಳವಾರ RCB ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಆದರೆ ಟಿಕೆಟ್ ಬಿಡುಗಡೆಗೊಂಡ ಕೇವಲ 15 ನಿಮಿಷದಲ್ಲಿ ಎಲ್ಲಾ ಟಿಕೆಟ್ ಮಾರಾಟವಾಗಿದೆ. ಹೀಗಾಗಿ ಕಳೆದೊಂದು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
ಎಲ್ಲಾ ತಂಡಗಳ ಪಂದ್ಯದ ಟಿಕೆಟ್ ದರಕ್ಕೆ ಹೋಲಿಸಿದರೆ ಆರ್‌ಸಿಬಿ ಟಿಕೆಟ್ ದರ ದುಬಾರಿಯಾಗಿದೆ.
ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯದ ಟಿಕೆಟ್ ಕನಿಷ್ಠ 3750 ರೂಪಾಯಿ, ಗರಿಷ್ಠ ದರ 47,000 ರೂಪಾಯಿ. ಈ ಟಿಕೆಟ್‌ಗಳು ನಿನ್ನೆ ಬಿಡುಗಡೆಯಾಗಿತ್ತು. ಆದರೆ ಈ ಟಿಕೆಟ್‌ಗಳು ಅಷ್ಟೇ ವೇಗದಲ್ಲಿ ಮಾರಾಟವಾಗಿದೆ.
ಇನ್ನು, ಬಾರಿ ಫಿಸಿಕಲ್ ಟಿಕೆಟ್ಗಳ ಬದಲಿಗೆ ಸಂಪೂರ್ಣವಾಗಿ QR ಕೋಡ್ ಆಧಾರಿತ ಡಿಜಿಟಲ್ ಟಿಕೆಟ್ ವ್ಯವಸ್ಥೆ ಜಾರಿಯಲ್ಲಿದೆ. ಪಂದ್ಯ ಆರಂಭಕ್ಕೂ 5 ಗಂಟೆ ಮೊದಲು ಮಾತ್ರ ಈ ಕೋಡ್ ಸಕ್ರಿಯವಾಗಲಿದ್ದು, ನಕಲಿ ಟಿಕೆಟ್ ಹಾವಳಿಗೆ ಬ್ರೇಕ್ ಹಾಕಲಾಗಿದೆ.
ಇನ್ನು, ಕಳೆದ ಬಾರಿ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ 11 ಅಭಿಮಾನಿಗಳು ಮೃತಪಟ್ಟಿದ್ದರು. ಇವರ ನೆನಪು ಹಾಗೂ ಗೌರವ ನಮನಕ್ಕಾಗಿ ಆರ್‌ಸಿಬಿ ಪ್ರತಿ ಪಂದ್ಯದಲ್ಲಿ 11 ಟಿಕೆಟ್ ಕಾಯ್ದಿರಿಸಲಿದೆ ಎಂದು ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
