PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಮೈಸೂರು: ಹೊಸ ವರ್ಷದ ಸಂಭ್ರಮ; ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಮೈಸೂರು: ಹೊಸ ವರ್ಷದ ಸಂಭ್ರಮ; ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ
ಮುಖಪುಟಮೈಸೂರು ನಗರಸನ್ನಿಧಾನ

ಮೈಸೂರು: ಹೊಸ ವರ್ಷದ ಸಂಭ್ರಮ; ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ

Prathinidhi News
Last updated: December 26, 2025 11:56 am
Prathinidhi News
Published December 26, 2025
Share
SHARE

ಮೈಸೂರು , ಡಿಸೆಂಬರ್‌ 26, 2025 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯೂ 2026ರ ಮೊದಲ ದಿನವಾದ ಜನವರಿ 1ರಂದು ಮೈಸೂರಿನ ವಿಜಯನಗರದಲ್ಲಿರುವ ಸುದರ್ಶನ ನರಸಿಂಹ ಕ್ಷೇತ್ರ ಎಂದೇ ಖ್ಯಾತಿಯಾಗಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಬರೊಬ್ಬರಿ 2 ಲಕ್ಷ ಲಡ್ಡುಗಳನ್ನು ಸಾರ್ವಜನಿಕರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Contents
ಡಾ. ರಾಜ್‌ಕುಮಾರ್ ಪ್ರೇರಣೆಯ ಈ ಕೈಂಕರ್ಯಸುದ್ದಿಗೋಷ್ಠಿಯಲ್ಲಿ ಮಾಹಿತಿ

ಈ ಬೃಹತ್ ಲಡ್ಡು ಕೈಂಕರ್ಯಕ್ಕಾಗಿ ಸುಮಾರು 100 ಮಂದಿ ನುರಿತ ಬಾಣಸಿಗರು ಹಗಲಿರುಳು ಶ್ರಮಿಸುತ್ತಿದ್ದಾರೆ. ಲಡ್ಡುಗಳ ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 100 ಕ್ವಿಂಟಾಲ್ ಕಡಲೆ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 1000 ಕೆಜಿ ಡೈಮಂಡ್ ಸಕ್ಕರೆ ಹಾಗೂ 2000 ಕೆಜಿ ಬೂರಾ ಸಕ್ಕರೆ. ತಲಾ 500 ಕೆಜಿ ಗೋಡಂಬಿ ಮತ್ತು ಒಣದ್ರಾಕ್ಷಿ, 250 ಕೆಜಿ ಬಾದಾಮಿ ಹಾಗೂ 50 ಕೆಜಿ ಪಿಸ್ತಾ. 50 ಕೆಜಿ ಏಲಕ್ಕಿ, 50 ಕೆಜಿ ಜಾಕಾಯಿ-ಜಾಪತ್ರೆ, 50 ಕೆಜಿ ಪಚ್ಚೆ ಕರ್ಪೂರ ಹಾಗೂ 200 ಕೆಜಿ ಲವಂಗ, 10,000 ಲೀಟರ್ ಉತ್ತಮ ಗುಣಮಟ್ಟದ ಖಾದ್ಯ ತೈಲವನ್ನು ಬಳಸಿ

ಡಾ. ರಾಜ್‌ಕುಮಾರ್ ಪ್ರೇರಣೆಯ ಈ ಕೈಂಕರ್ಯ

ಇನ್ನು, ಈ ಲಡ್ಡು ವಿತರಣಾ ಕಾರ್ಯಕ್ರಮದ ಹಿಂದೆ ಒಂದು ವಿಶೇಷ ಇತಿಹಾಸವಿದೆ. ಕನ್ನಡದ ಮೇರುನಟ ದಿವಂಗತ ಡಾ. ರಾಜ್‌ಕುಮಾರ್ ಅವರ ಪ್ರೇರಣೆಯಿಂದ ಈ ಸೇವೆ ಆರಂಭವಾಯಿತು. 1994ರ ಜನವರಿ 1ರಂದು ಕೇವಲ 1000 ಲಡ್ಡುಗಳ ವಿತರಣೆಯೊಂದಿಗೆ ಆರಂಭವಾದ ಈ ಸಂಪ್ರದಾಯ, ಇಂದು ಜನರ ಸಹಕಾರ ಮತ್ತು ಭಕ್ತಿಯಿಂದಾಗಿ 2 ಲಕ್ಷದ ಮೈಲಿಗಲ್ಲನ್ನು ತಲುಪಿದೆ.

- ಜಾಹೀರಾತು -

ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಯೋಗಾನರಸಿಂಹಸ್ವಾಮಿ ದೇಗುಲದ ಮುಖ್ಯಸ್ಥರಾದ ಪ್ರೊಫೆಸರ್ ಭಾಷ್ಯಂ ಸ್ವಾಮೀಜಿ ಅವರು ಮಾತನಾಡಿ, ಸಾರ್ವಜನಿಕರು ಶಿಸ್ತುಬದ್ಧವಾಗಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ದೇಗುಲದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್, ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಉಪಸ್ಥಿತರಿದ್ದರು.

ನೂತನ ವರ್ಷಾರಂಭ ಜನವರಿ 1ರ ಮುಂಜಾನೆಯಿಂದಲೇ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಆರಂಭವಾಗಲಿದ್ದು, ದೇಗುಲದ ವತಿಯಿಂದ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟರಾಜಕೀಯ

ಚಿಕ್ಕಬಳ್ಳಾಪುರ :ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಎಸ್ಕೇಪ್- ಪೊಲೀಸರ ಹಗಲು ರಾತ್ರಿ ಹುಡುಕಾಟ

January 24, 2026
ಮುಖಪುಟಮೈಸೂರು ನಗರರಾಜಕೀಯ

ರಾಜ್ಯಪಾಲರ ವಿರುದ್ಧ ಮೈಸೂರಿನಲ್ಲಿ ಕಾಂಗ್ರೆಸ್ ಆಕ್ರೋಶ: ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ

January 23, 2026
ನವದೆಹಲಿಮುಖಪುಟಮೈಸೂರು ನಗರ

ದೆಹಲಿ ಸ್ಫೋಟ ಹಿನ್ನೆಲೆ: ಮೈಸೂರಿನಲ್ಲಿ ಹೈ ಅಲರ್ಟ್, ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ

November 11, 2025
ಮುಖಪುಟಮೈಸೂರು ನಗರ

ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ‘ಖಾಕಿ’ ಕಣ್ಗಾವಲು: ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಹದ್ದಿನ ಕಣ್ಣು

December 31, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?