PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: “ಅಶೋಕ್ ಸಿಎಂ ಆಗಲಿ ಅಂತ ಅವರ ಪಕ್ಷದಲ್ಲೇ ಯಾರೂ ಹೇಳಲ್ಲ!”: ಆರ್. ಅಶೋಕ್ ಲೇವಡಿಗೆ ಶಾಸಕ ಎ. ಮಂಜು ಖಡಕ್ ಕೌಂಟರ್
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > “ಅಶೋಕ್ ಸಿಎಂ ಆಗಲಿ ಅಂತ ಅವರ ಪಕ್ಷದಲ್ಲೇ ಯಾರೂ ಹೇಳಲ್ಲ!”: ಆರ್. ಅಶೋಕ್ ಲೇವಡಿಗೆ ಶಾಸಕ ಎ. ಮಂಜು ಖಡಕ್ ಕೌಂಟರ್
ಮುಖಪುಟಮೈಸೂರು ನಗರರಾಜಕೀಯ

“ಅಶೋಕ್ ಸಿಎಂ ಆಗಲಿ ಅಂತ ಅವರ ಪಕ್ಷದಲ್ಲೇ ಯಾರೂ ಹೇಳಲ್ಲ!”: ಆರ್. ಅಶೋಕ್ ಲೇವಡಿಗೆ ಶಾಸಕ ಎ. ಮಂಜು ಖಡಕ್ ಕೌಂಟರ್

Prathinidhi News
Last updated: March 2, 2026 4:36 pm
Prathinidhi News
Published March 2, 2026
Share
SHARE

ಮೈಸೂರು, ಮಾರ್ಚ್‌ 2, 2026 : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಕ್ಕೆ ಶಾಸಕ ಎ. ಮಂಜು ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರೆಗ್ನೆಂಟ್ ಆಗಿ ಮಗು ಆದ ಮೇಲೆ ತಾಯಿ ಆ ಮಗುವಿನ ಬಗ್ಗೆ ಚಿಂತೆ ಮಾಡುತ್ತಾಳೆ. ಅದೇ ರೀತಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಇದೆ. ಹಾಗಾಗಿಯೇ ಎಲ್ಲರೂ ಅದನ್ನು ಹೇಳುತ್ತಿದ್ದಾರೆ” ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ ಆರ್. ಅಶೋಕ್ ಅವರಿಗೆ ಸವಾಲು ಹಾಕಿದ ಎ. ಮಂಜು ಅವರು, “ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ನಮ್ಮ ಪಕ್ಷದವರು ಧೈರ್ಯದಿಂದ ಹೇಳುತ್ತಾರೆ. ಆದರೆ ಆರ್. ಅಶೋಕ್ ಅವರು ಸಿಎಂ ಆಗಲಿ ಎಂದು ಅವರ ಪಕ್ಷದವರು (ಬಿಜೆಪಿ) ಯಾರಾದರೂ ಹೇಳಿದ್ದಾರಾ ಅಥವಾ ಮುಂದೆ ಹೇಳುತ್ತಾರಾ?” ಎಂದು ಪ್ರಶ್ನಿಸಿದರು. ಅಂತಿಮವಾಗಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ಹಿರಿಯ ನಾಯಕರು ಸೂಕ್ತ ಸಮಯದಲ್ಲಿ ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಅಲ್ಲಿನ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದರು. “ನಾನು ದುಬೈನಲ್ಲಿರುವ ಎಂಎಲ್ಸಿ ಭೋಜೇಗೌಡ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ, ಅವರು ತಾವು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ. ಈ ಹಿಂದೆಯೂ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದಿದ್ದರು. ಆ ನಂಬಿಕೆ ಮತ್ತು ಗೌರವ ಎಲ್ಲರಿಗೂ ಇದೆ” ಎಂದು ಹೇಳಿದರು.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕ್ರೈಂ ಸುದ್ದಿಗಳುಬೆಂಗಳೂರುಮುಖಪುಟ

ಅಕ್ರಮ ಸಂಬಂಧ: ಮಹಿಳೆಯ ಕಾಮದಾಹಕ್ಕೆ ಯುವಕ ಬಲಿ, ಕಾಟ ತಾಳಲಾರದೆ ಆತ್ಮಹತ್ಯೆ

November 5, 2025
ನಂಜನಗೂಡುಮುಖಪುಟ

ನಂಜನಗೂಡು: ಕಸಾಯಿಖಾನೆಗೆ ಸಾಗಿಸುತ್ತಿದ್ದ 38 ಜಾನುವಾರುಗಳ ರಕ್ಷಣೆ – ಚಾಲಕನ ಬಂಧನ

February 10, 2026
ಕ್ರೈಂ ಸುದ್ದಿಗಳುಬೆಂಗಳೂರುಮುಖಪುಟ

ಬೆಂಗಳೂರಿನಲ್ಲಿ 18 ಕೋಟಿ ದರೋಡೆ : ಕೆಲಸಕ್ಕೆ ಸೇರಿದ 20 ದಿನದಲ್ಲೇ ಕೈಚಳಕ ತೋರಿಸಿದ ದಂಪತಿ

January 28, 2026
ಮುಖಪುಟಮೈಸೂರು ನಗರ

ಮೈಸೂರು : ಮಾನವ-ಪ್ರಾಣಿ ಸಂಘರ್ಷ ನಿಲ್ಲಿಸಿ ; ರೆಸಾರ್ಟ್‌ಗಳ ಬಂದ್‌ಗೆ ಆಗ್ರಹಿಸಿ ರೈತರ ಪ್ರತಿಭಟನೆ

November 4, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?