PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ನನಗೂ ಎಂ.ಎಲ್‌.ಸಿ ಸ್ಥಾನ ಕೊಡಿ: ರಕ್ತದಲ್ಲಿ ಪತ್ರ ಬರೆದು ವರಿಷ್ಠರಿಗೆ ಮನವಿ ಮಾಡಿದ ಮೈಸೂರು ಬಸವಣ್ಣ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ನನಗೂ ಎಂ.ಎಲ್‌.ಸಿ ಸ್ಥಾನ ಕೊಡಿ: ರಕ್ತದಲ್ಲಿ ಪತ್ರ ಬರೆದು ವರಿಷ್ಠರಿಗೆ ಮನವಿ ಮಾಡಿದ ಮೈಸೂರು ಬಸವಣ್ಣ
ಮುಖಪುಟಮೈಸೂರು ನಗರರಾಜಕೀಯ

ನನಗೂ ಎಂ.ಎಲ್‌.ಸಿ ಸ್ಥಾನ ಕೊಡಿ: ರಕ್ತದಲ್ಲಿ ಪತ್ರ ಬರೆದು ವರಿಷ್ಠರಿಗೆ ಮನವಿ ಮಾಡಿದ ಮೈಸೂರು ಬಸವಣ್ಣ

Prathinidhi News
Last updated: December 19, 2025 4:11 pm
Prathinidhi News
Published December 19, 2025
Share
SHARE

ಮೈಸೂರು, ಡಿಸೆಂಬರ್‌ 19, 2025 : ರಾಜ್ಯ ರಾಜಕಾರಣದಲ್ಲಿ ಎಂ.ಎಲ್‌.ಸಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿರುವ ಬೆನ್ನಲ್ಲೇ, ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ವಿಭಿನ್ನವಾಗಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. “ನನಗೂ ಎಂ.ಎಲ್‌.ಸಿ ಸ್ಥಾನ ನೀಡಿ” ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ಅವರು ತಮ್ಮ ರಕ್ತದಲ್ಲೇ ಸಹಿ ಹಾಕಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ನಿಂತು ತಮ್ಮ ಅರ್ಜಿಯನ್ನು ಪೋಸ್ಟ್ ಮಾಡಿದ ಬಸವಣ್ಣ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ರಕ್ತಸಿಕ್ತ ಪತ್ರವನ್ನು ರವಾನಿಸಿದ್ದಾರೆ.

ಎಂ.ಎಲ್‌.ಸಿ ಸ್ಥಾನಕ್ಕಾಗಿ ಬಸವಣ್ಣ ಅವರು ಅರ್ಜಿ ಸಲ್ಲಿಸುತ್ತಿರುವುದು ಇದು ಮೂರನೇ ಬಾರಿ.ಹೊಸ ವರ್ಷದಲ್ಲಿ ಎಂ.ಎಲ್‌.ಸಿ ಸ್ಥಾನಗಳು ಖಾಲಿಯಾಗಲಿದ್ದು, ಈ ಬಾರಿ ತಮಗೆ ಅವಕಾಶ ಸಿಗಲಿದೆ ಎಂಬ ಭರವಸೆಯಲ್ಲಿ ಬಸವಣ್ಣ ಇದ್ದಾರೆ.  ಹಲವಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ಶ್ರಮವನ್ನು ಗುರುತಿಸಿ ಈ ಬಾರಿ ನೂರಕ್ಕೆ ನೂರರಷ್ಟು ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.  “ಮಾನ್ಯ ಮುಖ್ಯಮಂತ್ರಿಯವರು ಹಾಗೂ ವರಿಷ್ಠರು ಈ ಬಾರಿ ನನ್ನನ್ನು ಕೈಬಿಡುವುದಿಲ್ಲ. ರಕ್ತದ ಮೂಲಕ ಸಹಿ ಮಾಡಿ ನನ್ನ ನಿಷ್ಠೆಯನ್ನು ತೋರಿಸಿದ್ದೇನೆ. ಈ ಬಾರಿ ಎಂ.ಎಲ್‌.ಸಿ ಸ್ಥಾನ ಸಿಗುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ.” ಎಂದು ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಬಸವಣ್ಣ, ಈ ಬಾರಿ ವರಿಷ್ಠರ ಗಮನ ಸೆಳೆಯಲು ಈ ಸಾಹಸಕ್ಕೆ ಮುಂದಾಗಿದ್ದಾರೆ. ಇವರ ಈ ವಿಭಿನ್ನ ಮನವಿ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರ

ಮೈಸೂರು: ಹುಲಿಗಳ ಮಿಲನ ಕಾಲ; ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳೇನು? – ಡಾ. ರವಿಶಂಕರ್

November 4, 2025
ಮುಖಪುಟಮೈಸೂರು ನಗರ

ಬೆಳಗಾವಿ ದುರಂತದ ಬೆನ್ನಲ್ಲೇ ಮೈಸೂರು ಮೃಗಾಲಯದಲ್ಲಿ ವ್ಯಾಪಕ ಕಟ್ಟೆಚ್ಚರ : ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ!

November 22, 2025
ನಂಜನಗೂಡುಮುಖಪುಟಸನ್ನಿಧಾನ

ನಂಜನಗೂಡು: ಮತ್ತೆ ಕೋಟಿಯ ಒಡೆಯನಾದ ಶ್ರೀ ನಂಜುಂಡೇಶ್ವರ; ಒಂದೇ ತಿಂಗಳಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ

February 2, 2026
ಬೆಂಗಳೂರುಮುಖಪುಟ

ರಾಜಧಾನಿ ಬೆಂಗಳೂರಲ್ಲಿ “ವಿಷ”ಗಾಳಿ..! ; ರಾಷ್ಟ್ರ ರಾಜಧಾನಿಯನ್ನೂ ಮೀರಿಸುತ್ತಾ ರಾಜ್ಯ ರಾಜಧಾನಿ..?

December 23, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?