ತಾಂಡವಪುರ ,ನವಂಬರ್ 7, 2025 : ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಂಜನಗೂಡು ಬ್ಲಾಕ್, ನಗರ ಹಾಗೂ ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ‘ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾತನಾಡಿ, 2004ರಲ್ಲಿ, ಇ ವಿ ಎಂ ಮೂಲಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್. ಧ್ರುವನಾರಾಯಣ್ ಅವರು ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿ, ದೇಶದಲ್ಲೇ ಒಂದು ಇತಿಹಾಸ ನಿರ್ಮಿಸಿದರು. ಆ ಜಯದಿಂದ ಜನರು ಇ ವಿ ಎಂ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟರು. ಆದರೇ ಇಂದು ಕೇಂದ್ರದ ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯನ್ನು ಬಿಜೆಪಿ ಗೆಲುವಿಗೆ ಅನುಕೂಲವಾಗುವಂತೆ ಮಾಡಿಕೊಳ್ಳುವ ಮೂಲಕ ಕಳ್ಳ ಮತದಾನ ನಡೆಸುತ್ತಿರುವುದನ್ನು ವಿರೋಧಿಸಿ ಈ ಅಭಿಯಾನ ನಡೆಸಿ, ಈ ಸಂದರ್ಭದಲ್ಲಿ ನಾನು ಕೂಡ ಬಿಜೆಪಿಯ ಕಳ್ಳ ಮತದಾನ ಕ್ರಮಗಳ ವಿರುದ್ಧ ನನ್ನ ಬೆಂಬಲದ ಸಹಿಯನ್ನು ನೀಡಿದ್ದೇನೆ.
ಚುನಾವಣೆ ಆಯೋಗದ ದುರ್ಬಳಕೆ ಮೂಲಕ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯನ್ನು ಬಿಜೆಪಿ ಪರವಾಗಿ ತಿರುಗಿಸುವ ಪ್ರಯತ್ನ ನಡೆಯುತ್ತಿರುವುದು ಪ್ರಜಾತಂತ್ರದ ಮೂಲತತ್ವಗಳ ಮೇಲಿನ ನೇರ ದಾಳಿ.
ಇದಕ್ಕೆ ವಿರೋಧವಾಗಿ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಈ ಹೋರಾಟಾತ್ಮಕ ಅಭಿಯಾನವು ಜನರ ಮತದ ಹಕ್ಕಿನ ರಕ್ಷಣೆಗೆ ಮತ್ತು ಪ್ರಜಾಸತ್ತಾತ್ಮಕ ಭಾರತದ ಉಳಿವಿಗೆ ಬದ್ಧವಾಗಿದೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋಲಿಲದ ಸರದಾರರ ಎಂದೇ ಕರೆಸಿಕೊಂಡಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರು ಸಹ ಈ ವೋಟ್ ಚೋರು ಕಳ್ಳತನದಿಂದಲೇ ಅವರು ಸೋತಿರಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಇದಕ್ಕೆ ಪ್ರತಿ ಹಳ್ಳಿಯಲ್ಲೂ ಬೂತ್ ಬೆಟ್ಟದ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವೋಟ್ ಲಿಸ್ಟ್ ಅಲ್ಲಿ ಯಾರದಾದರೂ ಹೆಸರು ಬಿಟ್ಟಿದ್ದರೆ ಅದನ್ನು ಸೇರಿಸುವುದು ಮತ್ತು ನಮ್ಮ ಸ್ಥಳೀಕರಣದ ಎಷ್ಟೊ ಮಂದಿ ಮತದಾರರಾಗಿದ್ದಾರೆ ಅಂತವರನ್ನು ಗುರುತಿಸಿ ಅದನ್ನು ಚುನಾವಣಾ ಆಯೋಗ ಕಳಿಸಿಕೊಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ, ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ ಮಾರತಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಚಂದನ್,ತಾಲ್ಲೂಕು ಅಧ್ಯಕ್ಷರಾದ ವಿಜಯ್, ಕಾಂಗ್ರೆಸ್ ಮುಖಂಡರಾದ ಗಿರೀಶ್ ನಗರ ಅಧ್ಯಕ್ಷರಾದ ಮಹೇಶ್, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಆದರ್ಶ್, ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
