ಮೈಸೂರು, ಜನವರಿ 5, 2026: ಬಳ್ಳಾರಿ ಗಲಾಟೆ ವಿಚಾರದಲ್ಲಿ ನಿಕ್ಷಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬರಲಿ, ವರದಿ ಬಂದಾಗ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮೈಸೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಗಲಾಟೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಪ್ರಕರಣಕ್ಕೆ ಸಂಬಂಧಿಸಿದ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಬಳಿಕ ನೋಡೋಣ.ಸರಿಯಾದ ರೀತಿ ತನಿಖೆ ಆಗ್ತಿದೆ ತನಿಖೆ ನಂತರ ಸಿಎಂ ಡಿಸಿಎಂ ತೀರ್ಮಾನ ಮಾಡ್ತಾರೆ ಎಂದು ನುಡಿದರು.
ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಐದು ವರ್ಷಕ್ಕೆ ಸಿಎಂ ಆಯ್ಕೆ ಆಗಿರುವುದು, ಅದನ್ನು ನಾವು ಹಲವು ಬಾರಿ ಹೇಳಿದ್ದೇವೆ. ಮುಖ್ಯಮಂತ್ರಿಗಳು ಕೂಡ ಹಲವು ಬಾರಿ ಹೇಳಿದ್ದಾರೆ .ಅದಾಗ್ಯ ಮತ್ತೆ ಮತ್ತೆ ಈ ಪ್ರಶ್ನೆ ಚರ್ಚೆಗಳು ಬೇಡ ಈ ರೀತಿಯ ಎಲ್ಲಾ ಚರ್ಚೆಗಳು ನಿಲ್ಲಬೇಕಿದೆ.ಬಜೆಟ್ ನಂತರ ಅಧಿಕಾರ ಹಂಚಿಕೆ ನಡೆಯುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ನಾನು ಆ ರೀತಿ ಮಾತನಾಡಿಲ್ಲ. ಹಾಗೂ ಅಧಿಕಾರ ಹಂಚಿಕೆಯ ನಿರ್ಧಾರ ಮಾಡುವ ಸ್ಥಾನದಲ್ಲೂ ನಾನು ಇಲ್ಲ. ನಾನು ಯಾವ ಸಿಎಂ ರೇಸ್ ನಲ್ಲೂ ಇಲ್ಲ. ಈಗ ಚರ್ಚೆಯ ಹಂತದಲ್ಲೂ ಇಲ್ಲ. ಅದೆಲ್ಲ ಬಂದಾಗ ನೋಡೋಣ ಎಂದು ಸಚಿವ ಸತೀಶ್ ಜಾರಕಿಹೋಳಿ ಮೈಸೂರಿನಲ್ಲಿ ಹೇಳಿಕೆ ನೀಡಿದರು.
