PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಮಲೆ ಮಹದೇಶ್ವರ ಮತ್ತೆ ಕೋಟ್ಯಾಧೀಶ..! 23 ದಿನದಲ್ಲಿ 2.33 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ..!
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಚಾಮರಾಜನಗರ > ಮಲೆ ಮಹದೇಶ್ವರ ಮತ್ತೆ ಕೋಟ್ಯಾಧೀಶ..! 23 ದಿನದಲ್ಲಿ 2.33 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ..!
ಚಾಮರಾಜನಗರಮುಖಪುಟಸನ್ನಿಧಾನ

ಮಲೆ ಮಹದೇಶ್ವರ ಮತ್ತೆ ಕೋಟ್ಯಾಧೀಶ..! 23 ದಿನದಲ್ಲಿ 2.33 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ..!

Prathinidhi News
Last updated: March 28, 2026 11:28 am
Prathinidhi News
Published March 28, 2026
Share
SHARE

ಚಾಮರಾಜನಗರ, ಮಾರ್ಚ್ 28, 2026 : ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯವು ಯಶಸ್ವಿಯಾಗಿ ನೆರವೇರಿತು.

ಶ್ರೀ ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀ ರಘು ಅವರ ನೇತೃತ್ವದಲ್ಲಿ ಬೆಳಿಗ್ಗೆ 7:00 ಗಂಟೆಯಿಂದ ಎಣಿಕೆ ಪ್ರಕ್ರಿಯೆ ಆರಂಭವಾಯಿತು.

ಕಳೆದ 23 ದಿನಗಳ ಅವಧಿಯಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆಯ ಮೊತ್ತವು ಹುಂಡಿ ಮತ್ತು ಇ-ಹುಂಡಿ ಸೇರಿದಂತೆ ಒಟ್ಟು ರೂ. 2,33,84,201.00 ಸಂಗ್ರಹವಾಗಿದೆ. ನಗದಿನ ಜೊತೆಗೆ ಭಕ್ತರು ಸ್ವಾಮಿಗೆ 21 ಗ್ರಾಂ ಚಿನ್ನ ಹಾಗೂ 800 ಗ್ರಾಂ ಬೆಳ್ಳಿಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

- ಜಾಹೀರಾತು -

ಈ ಸಂದರ್ಭದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮರಿಸ್ವಾಮಿ ಕಾಗಲವಾಡಿ, ಹಣಕಾಸು ಸಲಹೆಗಾರರಾದ ಮಹದೇವು, ಉಪ ಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್. ಮತ್ತು ಜಿಲ್ಲಾಡಳಿತದ ಪರವಾಗಿ ಮಹೇಶ್ ಚಂದ್ರ ಉಪಸ್ಥಿತರಿದ್ದರು. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮುಖ್ಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡು ಪ್ರಕ್ರಿಯೆಯನ್ನು ಸುಗಮವಾಗಿ ಪೂರೈಸಿದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರರಾಜಕೀಯ

ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಅಡಿಪಾಯ ಹಾಕಿದ ಮಾಜಿ ಸಂಸದ ಪ್ರತಾಪ್‌ ಸಿಂಹ : ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ

January 5, 2026
ಮುಖಪುಟಮೈಸೂರು ನಗರಸನ್ನಿಧಾನ

ಸತತ 136 ವರ್ಷಗಳ ಇತಿಹಾಸ: ಮೈಸೂರಿನ ಶಿವರಾಂಪೇಟೆಯಲ್ಲಿ ಸಡಗರದ ರಾಮನವಮಿ, ಭಕ್ತರ ಸಾಗರ

March 27, 2026
ಮುಖಪುಟಮೈಸೂರು ನಗರ

ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಮೈಸೂರಿನಲ್ಲಿ ಭಕ್ತಿಪೂರ್ವಕ ಪುಷ್ಪ ನಮನ

January 21, 2026
ಬೆಂಗಳೂರುಮುಖಪುಟಸಿನಿಮಾ

“ಟಾಕ್ಸಿಕ್” ಸಿನಿಮಾ ವಿರುದ್ಧ ಕ್ರೈಸ್ತ ಬಾಂಧವರು ಗರಂ..! ಯಶ್ ಸಿನಿಮಾ ಟೀಸರ್ ನ ಅಶ್ಲೀಲ ದೃಶ್ಯಕ್ಕೆ ಬೀಳುತ್ತಾ ಕತ್ತರಿ..?

February 11, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?