ಚಾಮರಾಜನಗರ, ನವೆಂಬರ್ 27, 2025 : ಕರ್ನಾಟಕ ತಮಿಳುನಾಡು ಗಡಿ ಪ್ರದೇಶವಾದ ಎತ್ತಿಗಟ್ಟಿ ಸಮೀಪ ಬರೋಬ್ಬರಿ 20ಕ್ಕೂ ಅಧಿಕ ಕಾಡಾನೆ ಹಿಂಡು ಜಮೀನುಗಳಿಗೆ ಲಗ್ಗೆ ಇಟ್ಟಿದ್ದು, ರೈತರು ಬೆಚ್ಚಿಬಿದ್ದಿದ್ದಾರೆ.

ಬೆಳಗಿನ ಜಾವ ಆನೆಗಳ ಹಿಂಡು ಜಮೀನಿಗೆ ನುಗ್ಗಿ ರಸ್ತೆ ದಾಟಿವೆ. ರಸ್ತೆಯಲ್ಲಿ ಜನರು ಓಡಾಡೋಕೆ ಬೆದರುತ್ತಿದ್ದಾರೆ. ಮಧ್ಯ ರಾತ್ರಿ ಹಾಗೂ ಬೆಳಗಿನ ಜಾವ ಆನೆಗಳ ಓಡಾಟ ಮುಂದುವರಿದಿದೆ. ಆನೆಗಳು ಹಳ್ಳಿಗಳಿಗೆ ನುಗ್ಗುವ ಆತಂಕ ಎದುರಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಗೆ ಮನವಿ ಮಾಡಲಾಗಿದೆ.
ಒಂದು ವೇಳೆ 20ಕ್ಕೂ ಹೆಚ್ಚು ಕಾಡಾನೆಗಳು ಗ್ರಾಮಕ್ಕೆ ನುಗ್ಗಿದರೆ ಪ್ರಾಣಪಾಯದ ಭೀತಿ ಇದೆ. ಬೈಕ್ ಸವಾರನ ಮೊಬೈಲ್ ಕ್ಯಾಮರದಲ್ಲಿ ಸೆರೆಯಾದ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ದಾಟುವ ದೃಶ್ಯ ಸೆರೆಯಾಗಿದೆ.
